Aug 24, 2020, 1:13 PM IST
ನವದೆಹಲಿ(ಆ.24): ಕಾಂಗ್ರೆಸ್ ಪಾಳಯದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಒಂದೆಡೆ ಸೋನಿಯಾ ಗಾಂಧಿ ಅಧ್ಯಕ್ಷ ಗಾಧಿಯಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದರೆ, ಅತ್ತ ರಾಹುಲ್ ಗಾಂಧಿ ಕೂಡಾ ಈ ಪಟ್ಟಕ್ಕೇರಲು ಒಪ್ಪದಿದ್ದರೆ ಎಐಸಿಸಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಬಹುದೆಂಬ ಕುತೂಹಲ ಮನೆ ಮಾಡಿದೆ.
ಸದ್ಯ ಈ ರೇಸ್‌ನಲ್ಲಿ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಕೂಡಾ ಸದ್ದು ಮಾಡಿದೆ. ಇವರೊಂದಿಗೆ ಈ ರೇಸ್‌ನಲ್ಲಿ ಮಾಜಿ ಸಿಎಂಗಳಾದ ಕಮಲನಾಥ್, ಗುಲಾಂ ನಬಿ ಆಜಾದ್, ಅಹ್ಮದ್ ಪಟೇಲ್, ಪಿ. ಚಿದಂಬರಂ, ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಹೆಸರು ಕೂಡಾ ಚಾಲ್ತಿಗೆ ಬಂದಿದೆ.
ಮಲ್ಲಿಕಾರ್ಜುನ ಖರ್ಗೆಗೆ ಈ ಅವಕಾಶ ಸಿಗುವ ಸಾಧ್ಯತೆಗಳು ಎಷ್ಟಿದೆ? ಇಲ್ಲಿದೆ ವಿವರ