Sep 10, 2024, 5:13 PM IST
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಯ ಬುಡದಲ್ಲಿ ಟೈಂ ಬಾಂಬ್ ಫಿಕ್ಸ್ ಆಗಿದೆ ಅಂತಿದ್ದಾರೆ ಮಾಜಿ ಸಚಿವ ಸಿ.ಟಿ ರವಿ.. ದೀಪಾವಳಿಗೂ ಮೊದ್ಲೇ ಟೈಂ ಬಾಂಬ್ ಸ್ಫೋಟಿಸಲಿದೆ ಅಂತಿದ್ದಾರೆ ಕೇಸರಿ ಕಲಿ. ಹಾಗಾದ್ರೆ ಸಿದ್ದರಾಮಯ್ಯನವರ ಕೊರಳಿಗೆ ಸುತ್ತಿಕೊಂಡಿರೋ ಮುಡಾ ಉರುಳು ಸರ್ಕಾರವನ್ನೇ ಆಪೋಶನ ತೆಗೆದುಕೊಳ್ಳಲಿದ್ಯಾ? ಸಿದ್ದು ಪದಚ್ಯುತಿಗೊಂಡ್ರೆ, ಅಂತರ್ಯುದ್ಧವೇ ಕೈ ಸರ್ಕಾರವನ್ನು ಉರುಳಿಸುತ್ತಾ? ಕಮಲದಳ ನಾಯಕರ ಈ ಲೆಕ್ಕಾಚಾರ ನಿಜವಾಗುತ್ತಾ? ಇದನ್ನು ತಪ್ಪಿಸಲು ಕಾಂಗ್ರೆಸ್ ಬಳಿಯಿರೋ ಅಸ್ತ್ರಗಳೇನೇನು?
ಬಿಸ್ಕತ್ತು ತಿನ್ನುವ ಅಭ್ಯಾಸವಿದೆಯೇ? ಮಿತಿಮೀರಿದರೆ ಮಕ್ಕಳ ಆರೋಗ್ಯಕ್ಕೆ ಸಂಚಕಾರ!
ಮುಡಾ ಶರಪಂಜರದಲ್ಲಿ ಸಿಲುಕಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋರ್ಟ್ ಮೊರೆ ಹೋಗಿದ್ದಾರೆ. ಒಂದು ವೇಳೆ ಕೋರ್ಟ್ ತೀರ್ಪು ಸಿದ್ದರಾಮಯ್ಯನವರ ವಿರುದ್ಧ ಬಂದ್ರೆ.? ಮುಡಾ ಪ್ರಕರಣದಲ್ಲಿ ಸಿದ್ದು ವಿರುದ್ಧ ಎಫ್ಐಆರ್ ದಾಖಲಾಗಿ ರಾಜೀನಾಮೆಗೆ ಒತ್ತಡ ಹೆಚ್ಚಾದ್ರೆ..? ಆಗ ಸಿದ್ದರಾಮಯ್ಯನವರ ನಿರ್ಧಾರವೇನು..? ಹೈಕಮಾಂಡ್ ನಿಲುವೇನು.?
ಜಗತ್ತಿನ ನಾಲ್ಕನೇ ಅತಿದೊಡ್ಡ ರೈಲು ಜಾಲ ಹೊಂದಿದ ಭಾರತದ ರೈಲ್ವೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!
ಮುಡಾ ಕೇಸ್'ಗೆ ಸಂಬಂಧ ಪಟ್ಟ ಹಾಗೆ ಹೈಕೋರ್ಟ್'ನಲ್ಲಿ ಒಟ್ಟು ಐದು ದಿನ ವಾದ-ಪ್ರತಿವಾದ ನಡೆದಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 12ಕ್ಕೆ ನಿಗದಿಯಾಗಿದೆ. ಅಲ್ಲಿವರೆಗೆ ಸಿದ್ದರಾಮಯ್ಯನವರಿಗೆ ರಿಲೀಫ್. ಮುಂದಿನ ಕಥೆ ಏನು..? ಉತ್ತರಕ್ಕಾಗಿ ಕಾಯೋಣ