vuukle one pixel image

ಕಾಂಗ್ರೆಸ್‌ನಲ್ಲಿ ಕಂಡ ಕಂಡೋರೆಲ್ಲಾ ಸಿಎಂ ಖುರ್ಚಿ ಖಾಲಿಯಾಗ್ತಿದೆ ಅಂತಾ ಟವೆಲ್ ಹಾಕ್ತಿದ್ದಾರೆ?

Sep 10, 2024, 6:20 PM IST

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲೀಗ ಮುಖ್ಯಮಂತ್ರಿ ಕುರ್ಚಿಗೆ ಮ್ಯೂಸಿಕಲ್ ಚೇರ್ ಶುರುವಾಗಿದೆ. ಮಡಾ ಟೆನ್ಷನ್ನಲ್ಲಿ ಸಿಎಂ ಸಿದ್ದರಾಮಯ್ಯ ಇದ್ರೆ ಆಕಾಂಕ್ಷಿಗಳಿಗೆ ಕುರ್ಚಿ ಆಸೆ ಆರಂಭವಾಗಿದೆ.. ಚಾನ್ಸ್ ಸಿಕ್ರೆ ನಾನು ಕೂಡ ಸಿಎಂ ಆಗಿಬಿಡೋಣ ಅಂತ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕ್ತಾ ಇರೋದು ಯಾರ್ಯಾರು..?ಈ ಎಲ್ಲದರ ಮಧ್ಯೆ ಸಿದ್ದರಾಮಯ್ಯ ಪರವಾಗಿ ನಿಂತಿದ್ದ ಡಿ.ಕೆ.ಶಿವಕುಮಾರ್ ಅವರ ಆ ಒಂದು ಲೆಕ್ಕಾಚಾರ ತಪ್ತಾ ಇರೋದು ಹೇಗೆ..? ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿಗೆ ಕಾಂಗ್ರೆಸ್ನಲ್ಲಿ ಶುರುವಾಗಿರುವ ಆಂತರಿಕ ಪೊಲಿಟಿಕಲ್ ದಂಗಲ್ ಸ್ಟೋರಿ ಇಲ್ಲಿದೆ ನೋಡಿ..

ರಾಜ್ಯದಲ್ಲಿ ಹಲವು ನಾಯಕರ ಕಣ್ಣು ಸಿಎಂ ಕುರ್ಚಿಯ ಮೇಲೆ ಬದ್ದಿದೆ. ಚಾನ್ಸ್ ಸಿಕ್ರೆ ಕೂತು ಬಿಡೋಣ ಅಂತ ತುದಿಗಾಲಲ್ಲಿ ನಿಂತಂತೆ ಕಾಣ್ತಾ ಇದೆ.. ಹಾಗಾಗಿನೇ ಏನೋ ಅಂತರಂಗದ ಆಸೆಗಳು ಬಹಿರಂಗವಾಗಿ ವ್ಯಕ್ತವಾಗ್ತಿವೆ. ಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದ್ರಿಂದ ಕೈ ಪಾಳಯದ ಒಳಗೆ ನಡೆಯುತ್ತಿದೆ ಮುಸುಕಿನ ಗುದ್ದಾಟ, ಮಾತಿನ ಜಟಾಪಟಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸಿಎಂ ಕುರ್ಚಿಯ ಬಗ್ಗೆ ಶುರುವಾಗಿರುವ ಚರ್ಚೆಯಿಂದ ಸಿಎಂ ಸಿದ್ದರಾಮಯ್ಯಗೆ ಮಾತ್ರ ಟೆನ್ಷನ್ ಆಗ್ತಿಲ್ಲ. ಅವರ ಜೊತೆಗೆ ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವ್ರಿಗೂ ತಲೆಬಿಸಿ ಶುರುವಾದಂತಿದೆ. ತನ್ನೆಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗೋ ಆತಂಕದಲ್ಲಿ ಅವರಿದ್ದ ಹಾಗಿದೆ. 

ಅಂತೂ ಭರ್ಜರಿ ಬಹುಮತ ಇದ್ದೂ ಕೂಡ, ಬಲಿಷ್ಠ ಸರ್ಕಾರ ನಡೆಸೋದೇ ಕಷ್ಟಕ್ಕೆ ಬಂದಿದೆ ಸಿದ್ದರಾಮಯ್ಯನೋರಿಗೆ.. ಮುಡಾ ಗ್ರಹಣದ ಎಫೆಕ್ಟ್ನಿಂದ ಸಿಎಂ ಪಾರಾಗೋ ಹೊತ್ತಿಗೆ ಇನ್ನೂ ಏನೇನು ಸಂಗತಿಗಳು ಘಟಿಸುತ್ತವೋ ಗೊತ್ತಿಲ್ಲ.