WATCH: ಚನ್ನಪಟ್ಟಣ ಪಗಡೆ ಗೆಲ್ಲಲು ದಳಪತಿಯ ರೋಚಕ ದಾಳ: 80 ಸಾವಿರ ಮತಗಳ ಲೆಕ್ಕ ಬಿಚ್ಚಿಟ್ಟ ನಿಖಿಲ್!

WATCH: ಚನ್ನಪಟ್ಟಣ ಪಗಡೆ ಗೆಲ್ಲಲು ದಳಪತಿಯ ರೋಚಕ ದಾಳ: 80 ಸಾವಿರ ಮತಗಳ ಲೆಕ್ಕ ಬಿಚ್ಚಿಟ್ಟ ನಿಖಿಲ್!

Published : Oct 14, 2024, 01:02 PM IST

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್ ಆಗಿದ್ದು, ಡಿಕೆ ಶಿವಕುಮಾರ್ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ಸೈನಿಕ ಯೋಗೇಶ್ವರ್ ಅವರ ನಿಗೂಢ ನಡೆಗಳು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ.

ಚನ್ನಪಟ್ಟಣದಲ್ಲಿ ಶುರುವಾಗಿದೆ ರೋಚಕ ಪಗಡೆಯಾಟಯ. ಪಟ್ಟಣ ಗೆಲ್ಲಲು ದಳಪತಿಯ ರಣವ್ಯೂಹ, ತೋಟದ ಮನೆಯಲ್ಲೇ ದಳವಾಯಿಗಳಿಗೆ ಭರ್ಜರಿ ಬಾಡೂಟ ಮಾಡಿಸಲಾಗಿದೆ. ಕುಮಾರಸ್ವಾಮಿ ಪುತ್ರದಾಳ ಉರುಳಿಸಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ. ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಪಟ್ಟಣದ ಅಖಾಡದಲ್ಲಿ ನಡೆಯುವ ಬೊಂಬೆಯಾಟದಲ್ಲಿ ಸೈನಿಕ ಯೋಗಿಯ ನಿಗೂಢ ಹೆಜ್ಜೆ, ಮತ್ತೆ ನಾನೇ ಅಭ್ಯರ್ಥಿ ಎಂದ ಕಾಂಗ್ರೆಸ್ ಸಾರಥಿ ಡಿಕೆ ಶಿವಕುಮಾರ್ ಅವರ ನಡೆಗಳು ಕೂಡ ಮಹತ್ವವಾಗಿವೆ. ಇದರ ನಡುವೆಯೇ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ 80 ಸಾವಿರ ಮತಗಳ ಲೆಕ್ಕ ಬಿಚ್ಚಿಟ್ಟಿದ್ದಾರೆ. ಹಾಗಾದರೆ, ಚನ್ನಪಟ್ಟಣದ ಉಪಚುನಾವಣೆ ರಣತಂತ್ರ ಏನೆಂದು ಇಲ್ಲಿ ನೋಡೋಣ ಬನ್ನಿ..

ಚನ್ನಪಟ್ಟಣ ಉಪಚುನಾವಣೆಯ ಮೇಲೆ ಇನ್ನಿಲ್ಲದ ಕುತೂಹಲ. ಕಾರಣ ದಳಪತಿಗಳು ಉರುಳಿಸ್ತಾ ಇರೋ ಒಂದೊಂದು ದಾಳ.ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್ ಅಂತ ಹೇಳಲಾಗ್ತಿದೆ. ಅತ್ತ ಕಡೆ ಕಾಂಗ್ರೆಸ್'ನಿಂದ ನಾನೇ ಅಭ್ಯರ್ಥಿ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳ್ತಿದ್ದಾರೆ. ಎರಡೂ ಪಕ್ಷಗಳಿಂದ ಯಾರೇ ಅಭ್ಯರ್ಥಿಯಾಗಲಿ.., ಫಲಿತಾಂಶ ನಿಂತಿರೋದು ಸೈನಿಕನ ನಡೆಯ ಮೇಲೆ.. ಅಷ್ಟಕ್ಕೂ ಬೊಂಬೆನಾಡಿನ ರಣರಂಗದಲ್ಲಿ ಯೋಗೇಶ್ವರ್ ನಡೆಯೇ ಅಷ್ಟೊಂದು ನಿರ್ಣಾಯಕವಾಗಿದೆ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more