ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ!

Oct 8, 2024, 8:15 PM IST

ಚನ್ನಪಟ್ಟಣ ಚದುರಂಗದಲ್ಲಿ ಉರುಳಿತು ದಳಪತಿಗಳ ರೋಚಕ ದಾಳ.. ಗೌಡರ ಮೊಮ್ಮಗ, ಕುಮಾರಣ್ಣನ ಮಗನೇ ಬೊಂಬೆನಾಡು ಬೈ ಎಲೆಕ್ಷನ್'ನಲ್ಲಿ ದೋಸ್ತಿ ಅಭ್ಯರ್ಥಿಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಂಡೆ ಖ್ಯಾತಿಯ ಡಿಕೆ ಶಿವಕುಮಾರ್ ಹೆಣೆದ ಚಕ್ರವ್ಯೂಹಕ್ಕೆ ನುಗ್ಗಲಿದ್ದಾರಾ ಆಧುನಿಕ ಅಭಿಮನ್ಯು ನಿಖಿಲ್ ನುಗ್ಗಲಿದ್ದಾರಾ ಎಂಬ ಪ್ರಶ್ನೆಗಳು ಎದುರಾಗಿವೆ. ಈಗಾಗಲೇ ಸೋತು ಸುಣ್ಣವಾಗಿರೋ ಮಗನನ್ನು ಮತ್ತೊಂದು ಮಹಾಯುದ್ಧಕ್ಕೆ ದಳಪತಿ ಕುಮಾರಸ್ವಾಮಿ ಇಳಿಸುತ್ತಾರಾ ಎಂಬ ಕುತೂಹಲವೂ ಹೆಚ್ಚಾಗಿದೆ. ಇದರ ಬೆನ್ನಲ್ಲಿಯೇ ಕುಮಾರಸ್ವಾಮಿ ಅವರು ಹಾಲನ್ನಾದ್ರೂ ಕೊಡಿ, ವಿಷವನ್ನಾದ್ರೂ ಕೊಡಿ ಎಂದು ಹೇಳಿಕೆ ನೀಡಿದ್ದಾರೆ.

ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿಯವ್ರೇ ದೋಸ್ತಿ ಪಡೆಯ ಅಭ್ಯರ್ಥಿಯಾದರೆ, ಟಿಕೆಟ್ ಮೇಲೆ ಕಣ್ಣಿಟ್ಟಿರೋ ಸೈನಿಕನ ನಡೆಯೇನು ಎನ್ನುವುದು ಕೂಡ ದಡ್ಡ ಚಿಂತೆಯಾಗಿದೆ. ಬೊಂಬೆನಾಡಿನಲ್ಲಿ ದಳಪತಿಗಳು ಹೆಜ್ಜೆ ಇಡ್ತಾ ಇದ್ದಂತೆ ಚನ್ನಪಟ್ಟಣದ ಸೈನಿಕ ಸಿ.ಪಿ. ಯೋಗೇಶ್ವರ್ ದೆಹಲಿಗೆ ಹೋಗಿದ್ದಾರೆ. ಆದರೆ, ಯೋಗೇಶ್ವರ್ ನಿಗೂಢ ಹೆಜ್ಜೆಯ ಆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. ಚನ್ನಪಟ್ಟಣ ಚದುರಂಗದಲ್ಲಿ ಉರುಳಿರೋ ದಾಳ ಇಡೀ ಬೈ ಎಲೆಕ್ಷನ್ ದಿಕ್ಕನ್ನೇ ಬದಲಿಸೋ ಹಾಗೆ ಕಾಣ್ತಾ ಇದೆ. ದೋಸ್ತಿ ಪಾಳೆಯದಿಂದ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿಯಾದ್ರೆ, ಯೋಗೇಶ್ವರ್ ನಡೆ ಯಾವ ಕಡೆ ಎಂಬುದು ಯಕ್ಷ ಪ್ರಶ್ನೆಯಾಇದೆ. ಯೋಗೇಶ್ವರ್ ಪಕ್ಷೇತರ ಸ್ಪರ್ಧೆನಾ, ಡಿಕೆ ಜೊತೆ ದೋಸ್ತಿನಾ ಎಂಬುದು ಕಟ್ಟ ಕಡೆಯ ಪ್ರಶ್ನೆಯಾಗಿದೆ. ಸೈನಿಕನ ಅದೊಂದು ನಿರ್ಧಾರಕ್ಕೆ ಚನ್ನಪಟ್ಟಣದ ಬೈ ಎಲೆಕ್ಷನ್ ದಿಕ್ಕನ್ನೇ ಬದಲಿಸೋ ಸಾಮರ್ಥ್ಯ ಇರೋದಂತೂ ಸತ್ಯ.