ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್? ನವದೆಹಲಿಯಲ್ಲಿ ಬಿಎಸ್ ಯಡಿಯೂರಪ್ಪ ಹರಸಾಹಸ/ ಶುಕ್ರವಾರ ಅಮಿತ್ ಶಾ ಒಪ್ಪಿಗೆ ಸಿಗಲಿದೇಯಾ?
ನವದೆಹಲಿ(ಜ. 31) ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಳ್ಳಲು ನವದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಹರಸಾಹಸ ಮಾಡುತ್ತಿದ್ದಾರೆ. ಅನರ್ಹ ಪಟ್ಟ ಮೀರಿ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಉಪಚುನಾವಣೆಯಲ್ಲಿ ಗೆದ್ದಿರುವವರನ್ನು ಮಂತ್ರಿ ಮಾಡಲು ಒಂದು ಅವಕಾಶ ಮಾಡಿಕೊಡಿ ಎಂದು ಸಿಎಂ ಯಡಿಯೂರಪ್ಪ ಶತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಮಿತ್ ಶಾ ಬಿಎಸ್ ವೈ ಕೈಗೆ ಸಿಗುತ್ತಿಲ್ಲ. ಹಾಗಾದರೆ ಮುಂದೇನು?