ಬೆಂಗಳೂರು (ನ.21): ಸರ್ಕಾರ ಪತನವಾಗುತ್ತಿದ್ದಂತೆ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿಯೂ ಮುಗಿದಿದೆ. ಇನ್ನೇನಿದ್ದರೂ ಸ್ವತಂತ್ರ ಹೋರಾಟ ಎಂದು ಉಭಯಪಕ್ಷಗಳು ಘೋಷಿಸಿಕೊಂಡಿದ್ದವು. ಎರಡೂ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ಕೂಡಾ ನಡೆಸಿದ್ದಾರೆ. ಆದರೆ, ಉಪಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಖೀಯ ಸಮೀಕರಣಗಳು ಬದಲಾಗಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪರಸ್ಪರ ಕೈಜೋಡಿಸಿವೆ ಎಂಬ ಅನುಮಾನಗಳು ದಟ್ಟವಾಗಿವೆ. ಇಲ್ಲಿದೆ ‘ಸೀಕ್ರೆಟ್ ಮೈತ್ರಿ’ಯ ಕಂಪ್ಲೀಟ್ ಕಹಾನಿ.... 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ, ಇಂದು ನ.21 [ಗುರುವಾರ] ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿತ್ತು. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ. ನವೆಂಬರ್ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: