ಚುನಾವಣೆ ಘೋಷಣೆ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಬ್ರೇಕ್?

Sep 29, 2020, 5:57 PM IST

ಬೆಂಗಳೂರು (ಸೆ. 29): ಶಿರಾ, ಆರ್‌ಆರ್‌ ನಗರ ಉಪಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಬ್ರೇಕ್ ಬಿದ್ದಂತಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ವಿಸ್ತರಣೆಗೆ ಪ್ಲಾನ್ ಮಾಡಿದ್ದರು ಸಿಎಂ ಯಡಿಯೂರಪ್ಪ. ಅಕ್ಟೋಬರ್ 2 ರಂದು ದೆಹಲಿಗೆ ತೆರಳಲು ಮುಂದಾಗಿದ್ಧಾರು ಸಿಎಂ. ಆದರೆ ಈಗ ಉಪಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. 

ಶಿರಾ, RR ನಗರ ಬೈ ಎಲೆಕ್ಷನ್: ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಗೆ ಸವಾಲಿನ ಚುನಾವಣೆ

ಸಂಪುಟ ವಿಸ್ತರಣೆಯಾದರೂ, ಪುನಾರಚನೆಯಾದರೂ ಒಂದಷ್ಟು ಅಸಮಾಧಾನ ಏಳುವುದು ಸಹಜ. ಅದು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!