ಸಿದ್ದು ತಂತ್ರ ಸಕ್ಸಸ್: ಕಾಂಗ್ರೆಸ್‌ಗೆ ಹಾರಿದ ಕಾಗೆ, ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್

Nov 11, 2019, 3:04 PM IST

ಬೆಂಗಳೂರು, [ನ.11]: ರಾಜ್ಯದ 15 ಕ್ಷೇತ್ರಗಳ ಬೈ ಎಲೆಕ್ಷನ್ ಗೆ ಕಾಂಗ್ರೆಸ್ ಈಗಾಗಲೇ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 8 ಕ್ಚೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.

ಇನ್ನುಳಿದ 7 ಕ್ಷೇತ್ರಗಳಿಗೆ ಕಾದು ನೋಡುವ ತಂತ್ರ ಅನುಸರಿಸಿದ್ದ ಕಾಂಗ್ರೆಸ್ ಸಕ್ಸಸ್ ಆಗಿದೆ. ಬಿಜೆಪಿಯಿಂದ ವಲಸೆ ಬರುವ ನಾಯಕರಿಗೆ ಟಿಕೇಟ್ ನೀಡಲು ಪ್ಲಾನ್ ಮಾಡಿ ಕಾದು ಕುಳಿತಿದ್ದ ಕಾಂಗ್ರೆಸ್ ಗೆ ಕಾಗೆ ಹಾರಿಬಂದಿದೆ.  

ಕಾಂಗ್ರೆಸ್ ಗೆ ಹಾರಲು ಬಿಜೆಪಿ ಕಾಗೆ ಸಿದ್ಧತೆ : ಡಿಕೆಶಿ ಭೇಟಿ

ಇತ್ತೀಚೆಗಷ್ಟೇ ಡಿ.ಕೆ. ಶಿವಕುಮಾರ್​​ರನ್ನ ಭೇಟಿಯಾಗಿದ್ದ ಕಾಗೆ, ಈಗ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯರನ್ನ ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದ್ದು, ಅವರು ಬಿಜೆಪಿ ತೊರೆಯುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೇ  ಕಾಂಗ್ರೆಸ್ ಸೇರಲು ಮುಹೂರ್ತ ಸಹ ಫಿಕ್ಸ್ ಆಗಿದೆ. ಹಾಗಾದ್ರೆ ಕಾಗೆ ಕಾಂಗ್ರೆಸ್ ಸೇರುವುದ್ಯಾವಾಗ..? ವಿಡಿಯೋನಲ್ಲಿ ನೋಡಿ....

ಡಿ.5ರಂದು 15 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಡಿ.9ಕ್ಕೆ ಫಲಿತಾಂಶ ಹೊರಬೀಳಲಿದೆ.