Nov 4, 2024, 6:19 PM IST
ಇಷ್ಟು ದಿನದ್ದು ಒಂದು ಲೆಕ್ಕ.., ಇನ್ಮೇಲೆ ಶುರುವಾಗೋದು ಬೇರೇನೆ ಲೆಕ್ಕ.. ಇನ್ನುಳಿದ 10 ದಿನದಲ್ಲಿ ಗೊತ್ತಾಗುತ್ತೆ ಯಾರಿಗೆ ಗೆಲುವು ಅಂತ. ಉಪಕದನಕ್ಕೆ ಈ ದಶದಿನದಲ್ಲಿ ಎಂಟ್ರಿ ಕೊಟ್ಟು ಆರ್ಭಟಿಸಲಿದ್ದಾರೆ ಹುರಿಯಾಳುಗಳು.. ಇಷ್ಟು ದಿನ ನಡೆದ ಹೋರಾಟ.. ಹಾರಾಟ ಏನೇನು ಅಲ್ಲಾ.. ಇನ್ಮುಂದೆ ಮೂರು ಕ್ಷೇತ್ರಗಳಲ್ಲೂ ಆರಂಭವಾಗುತ್ತೆ ನೋಡಿ ನಿಜವಾದ ಕದನ ಕಾದಾಟ. ಪ್ರಚಾರಕ್ಕೆ ಘಟಾನುಘಟಿಗಳ ಎಂಟ್ರಿಯಾಗಲಿದೆ. ಚುನಾವಣಾ ಚಿತ್ರಣ ಇನ್ಮೇಲೆ ಬದಲಾಗುತ್ತೆ.
ಇದು ಚನ್ನಪಟ್ಟಣ ಕಥೆಯಾದ್ರೆ, ಸಂಡೂರು ಸಂಗ್ರಾಮದಲ್ಲಿಯೂ ರಣಕಲಿಗಳ ಆಟ ಆರಂಭವಾಗಲಿದೆ. ಕಡೆ 10 ದಿನದಲ್ಲಿ ಅಲ್ಲಿಯೂ ಹೋರಾಟ, ಹಾರಾಟಗಳೂ ಹೆಚ್ಚಾಗೋ ಸೂಚನೆ ಸಿಕ್ಕಾಗಿದೆ. ಈ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. ಹತ್ತು ದಿನ.. ಉಪಚನಾವಣೆ ಮತದಾನಕ್ಕೆ ಉಳಿದಿರುವ ಇನ್ನು ಹತ್ತು ದಿನ, ಸಂಡೂರಿನಲ್ಲಿ ಪ್ರಚಾರದ ಸುನಾಮಿಯೇ ಏಳಲಿದೆ. ಹತ್ತು ದಿನ ಕಡೇ ಆಟದಲ್ಲಿ ಗೆಲುವು – ಸೋಲಿನ ನಿರ್ಧಾರ ಅಡಗಿದೆ. ಹೀಗಾಗಿ ಅತ್ತ ಕೈ ಪಡೆ.. ಇತ್ತ ಮೈತ್ರಿ ಕೂಟ, ಇಬ್ಬರೂ ಪ್ರಚಾರವನ್ನ ಮತ್ತಷ್ಟು ಮಗದಷ್ಟು ಬಿರುಸುಗೊಳಿಸ್ತಾಯಿದ್ದಾರೆ.
ಚನ್ನಪಟ್ಟಣ, ಸಂಡೂರಿನಂತೆ ಶಿಗ್ಗಾಂವಿಯೂ ಕಡೇ 10 ದಿನದ ರಾಜಕೀಯ ಆಟಕ್ಕೆ ಸಾಕ್ಷಿಯಾಗಲಿದೆ. ಶಿಗ್ಗಾಂವಿ ರಣಕಣ ಇನ್ಮುಂದೆ ಯಾವ ರೀತಿ ರೋಚಕವಾಗುತ್ತೆ ಅಂತ ಹೇಳ್ತೀವಿ. ಕಡೇ ಹತ್ತು ದಿನದ ಆಟಕ್ಕೆ ಶಿಗ್ಗಾಂವಿ ರಣಕಣ ಸಜ್ಜಾಗಿದೆ. ಗೆಲುವೇ ಗುರಿ ಅಂತ ಎರಡು ಕಡೆಯವರು ಕನವರಿಸ್ತಾಯಿದ್ದಾರೆ. ಆದ್ರೆ, ಇನ್ನುಳಿದ ದಶ ದಿನ ಆ ಗೆಲುವು ಯಾರಿಗೆ ಅಂತ ತಿರ್ಮಾನ ಮಾಡುತ್ತೆ. ಯಾರಿಗೆ ಕೊರಳಿಗೆ ವಿಜಯ ಲಕ್ಷ್ಮೀ ಅನ್ನೋದು ಇನ್ನುಳಿದ 10 ದಿನದಲ್ಲಿ ಡಿಸೈಡ್ ಆಗುತ್ತೆ. ಯಾಕೆಂದ್ರೆ ನಿಜವಾದ ಕಾದಾಟ, ಕಾಳಗ ಇನ್ಮೇಲೆ ನಡೆಯುತ್ತೆ.