ಕೋವಿಡ್ ಹಗರಣ, ಗಲಭೆಯಲ್ಲಿ ಭಿಎಸ್‌ವೈ ಸರ್ಕಾರದ ವೈಫಲ್ಯ: ಕಟೀಲ್‌ ಬಿಚ್ಚಿಟ್ರು ವಿಷ್ಯ

Aug 28, 2020, 11:12 AM IST

ಬೆಂಗಳೂರು (ಆ. 28): ಕರ್ನಾಟಕದಲ್ಲಿ ರಾಜಕೀಯವಾಗಿ ತುಂಬ ಪ್ರಬಲ ಹುದ್ದೆಗಳ ಪೈಕಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕೂಡಾ ಒಂದು. ನಳೀನ್ ಕುಮಾರ್ ಕಟೀಲ್ ಈ ಹುದ್ದೆ ಅಲಂಕರಿಸಿ ಒಂದು ವರ್ಷ ಪೂರೈಸಿದ್ದಾರೆ. ಒಂದು ವರ್ಷದಲ್ಲಿ ಇವರ ಸಾಧನೆಗಳು, ಮುಂದಿನ ಗುರಿಗಳೇನು, ಕೆಲಸದಲ್ಲಿ ತೃಪ್ತಿ ಸಿಕ್ಕಿದೆಯಾ, ರಾಜಕೀಯದಲ್ಲಿ ಆಗಬಹುದಾದ ಬದಲಾವಣೆಗಳೇನು? ಎಂಬುದರ ಬಗ್ಗೆ ಸ್ವತಃ ನಳೀನ್ ಕುಮಾರ್ ಕಟೀಲ್ ಸುವರ್ಣ ನ್ಯೂಸ್‌ಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 7 ಬಾರಿ ಪ್ರವಾಸ ಮಾಡಿದ್ದೇನೆ. ಸಂಘಟನೆ ಜೊತೆ ಕೆಲಸ ಮಾಡಿದ್ದೇನೆ. ಇದರ ಬಗ್ಗೆ ತೃಪ್ತಿ ಇದೆ. ಇನ್ನಷ್ಟು ಕೆಲಸ ಮಾಡಬೇಕೆಂದಿದ್ದೇನೆ ಎಂದಿದ್ದಾರೆ. ಇನ್ನು ಮಂಗಳೂರು ಗಲಭೆ, ಇತ್ತೀಚಿಗೆ ನಡೆದ ಬೆಂಗಳೂರು ಗಲಭೆ ಪ್ರಕರಣ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಯ್ತಾ? ಎಂಬ ಪ್ರಶ್ನೆಗೆ, ಕೇವಲ 2 ಗಂಟೆಯಲ್ಲಿ ಗಲಭೆಯನ್ನು ನಿಯಂತ್ರಣಕ್ಕೆ ತಂದಿದ್ದು ನಮ್ಮ ಸರ್ಕಾರದ ತಾಕತ್ತು ಎಂದು ಸಮರ್ಥಿಸಿಕೊಂಡರು. ಕೋವಿಡ್‌ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆಯಲ್ಲಾ ಎಂಬ ಪ್ರಶ್ನೆಗೆ ಇದು ಕಾಂಗ್ರೆಸ್‌ ಹುನ್ನಾರ ಎಂದು ಹೇಳಿದ್ದಾರೆ. ಸವಾಲುಗಳಿಗೆ ನಳೀನ್ ಕುಮಾರ್ ಉತ್ತರಿಸಿದ್ದು ಹೀಗೆ. 

ಕಾಂಗ್ರೆಸ್ ಕಲಹ: 23 ಹಿರಿಯ ನಾಯಕರ ಪತ್ರದ ಹಿಂದೆ ನಡೆದ ಆಂತರಿಕ ಬೆಳವಣಿಗೆಗಳಿವು!