ವಿದ್ಯುತ್ ದರ ಏರಿಕೆ ವಿರುದ್ಧ 11 ಜಿಲ್ಲೆಗಳು ಬಂದ್, ಕಾಂಗ್ರೆಸ್ ಸರ್ಕಾರಕ್ಕೆ ಹೊಸ ತಲೆನೋವು!

Jun 22, 2023, 11:22 PM IST

ವಿದ್ಯುತ್ ದರ ಏರಿಕೆ ವಿರೋಧಿ ರಾಜ್ಯದ 11 ಜಿಲ್ಲೆಗಳಲ್ಲಿ ಬಂದ್ ನಡೆಸಲಾಗಿದೆ. ಕರ್ನಾಟಕ ಕೈಗಾರಿಕೋದ್ಯಮಿಗಳು ದರ ಏರಿಕೆ ವಿರೋಧಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಹಿಂದೆ ಇದ್ದ ದರವನ್ನೇ ಮುಂದುವರಿಸಿಬೇಕು. ದರ ಏರಿಕೆಯಿಂದ ತೀವ್ರ ನಷ್ಟವಾಗುತ್ತಿದೆ ಎಂದು ಕೈಗಾರಿಕೋದ್ಯಮಿಗಳು ಸರ್ಕಾರದ ವಿರುದ್ದ ಬಂದ್ ನಡೆಸಿದ್ದಾರೆ.ಇದರ ಜೊತೆಗೆ ರಾಜ್ಯದಲ್ಲಿ ಅಕ್ಕಿ ಕಾಳಗ ಜೋರಾಗಿದೆ. ಅನ್ನ ಭಾಗ್ಯ ಯೋಜನೆ ಆಗಸ್ಟ್ 1 ರಿಂದ ಜಾರಿಯಾಗುವ ಸಾಧ್ಯತೆ ಇದೆ. ಜುಲೈ 1 ರಿಂದ ಯೋಜನೆ ಜಾರಿಯಾಗುವುದಿಲ್ಲ ಇದಕ್ಕೆ ಕೇಂದ್ರ ಸರ್ಕಾರದ ರಾಜಕೀಯ ಕಾರಣ ಎಂದು ಸಚಿವ ಕೆಹೆಚ್ ಮುನಿಯಪ್ಪ ಹೇಳಿದ್ದಾರೆ.