Jul 20, 2023, 10:39 PM IST
ವಿಪಕ್ಷಗಳ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ ದುರ್ಬಳಕೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತೀವ್ರ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಇಂದು ರಾಜ್ಯಪಾಲರಿಗೆ ದೂರು ನೀಡಿದೆ.ಇತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ ದಲಿತ ಅಸ್ತ್ರ ಬಳಸಿದೆ. ಸಭಾಧ್ಯಕ್ಷರ ಮುಖದ ಮೇಲೆ ಮಸೂದೆ ಪ್ರತಿ ಹರಿದು ಹಾಕಿದ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ ದಲಿತರಿಗೆ ಅಪಮಾನ ಅನ್ನೋ ಹೋರಾಟ ಆರಂಭಿಸಿದೆ. ಇತ್ತ ದಲಿತ ಅಸ್ತ್ರಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಇತ್ತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕೂಡ ಹರಿಹಾಯ್ದಿದ್ದಾರೆ.