Ground Report : ದಾವಣಗೆರೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನೇರ ಫೈಟ್: ಟಿಕೆಟ್ ಕಸರತ್ತು ಜೋರು

Ground Report : ದಾವಣಗೆರೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನೇರ ಫೈಟ್: ಟಿಕೆಟ್ ಕಸರತ್ತು ಜೋರು

Published : Dec 12, 2022, 05:48 PM IST

ವೀರಶೈವ ಲಿಂಗಾಯತರ ಪ್ರಾಬಲ್ಯದ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಾಂಪ್ರದಾಯಿಕ ಎದುರಾಳಿಗಳು. ಜಿಲ್ಲೆಯಲ್ಲಿ ಟಿಕೆಟ್ ಫೈಟ್ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
 

ದಾವಣಗೆರೆ; ದಾವಣಗೆರೆ ಉತ್ತರ ಕಾಂಗ್ರೆಸ್'ನ ಎಸ್‌.ಎಸ್‌ ಮಲ್ಲಿಕಾರ್ಜುನ ಹಾಗೂ ಬಿಜೆಪಿಯ ಎಸ್‌.ಎ ರವೀಂದ್ರನಾಥ್‌ ಅಖಾಡವಾಗಿದೆ. ಆದರೆ 77ರ ಗಡಿ ದಾಟಿದ ರವೀಂದ್ರನಾಥ ಸ್ಪರ್ಧಿಸುತ್ತಾರೋ, ಇಲ್ಲವೋ ಎಂಬ ಗೊಂದಲವಿದೆ. ಸಂಸದ ಸಿದ್ದೇಶ್ವರ್ ರಾಜ್ಯ ರಾಜಕಾರಣದ ಬಗ್ಗೆ ಒಲವು ತೋರುತ್ತಿದ್ದಾರೆ.  ಕಾಂಗ್ರೆಸ್‌ನ ಮಲ್ಲಿಕಾರ್ಜುನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಪಕ್ಷದ ಸೂಚನೆಯಂತೆ 2 ಲಕ್ಷ ರೂ. ಡಿಡಿ ಕಟ್ಟಿಲ್ಲ. ನಾನು ಅರ್ಜಿ ಸಲ್ಲಿಸುತ್ತೇನೆ. ಆದರೆ, 2 ಲಕ್ಷ ಕೊಡಲ್ಲ ಅನ್ನೋ ಮೂಲಕ ತಮ್ಮ ಟಿಕೆಟ್‌ ಪಕ್ಕಾ ಎಂಬ ಸಂದೇಶ ಸಾರಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಯಶವಂತರಾವ್ ಸೇರಿ ಅನೇಕರು ಟಿಕೆಟ್ ಆಕಾಂಕ್ಷಿಗಳು, ಜೆಡಿಎಸ್'ನಿಂದ ಜಿ. ಅಮಾನುಲ್ಲಾ ಸ್ಪರ್ಧಿಸುವ ಸಾಧ್ಯತೆಯಿದೆ. ಮಾಯಕೊಂಡದಲ್ಲಿ ಬಿಜೆಪಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಬಿಜೆಪಿಯ ಪ್ರೊ.ಲಿಂಗಣ್ಣ ಟಿಕೆಟ'ಗೆ ಪ್ರಯತ್ನ ನಡೆಸುತ್ತಿದ್ದಾರೆ. ಜತೆಗೆ  ಎಂ.ಬಸವರಾಜ ನಾಯ್ಕ, ಜಿ.ಎಸ್‌.ಶ್ಯಾಮ್‌ , ಅನಿಲ್‌ ಸೇರಿ ಹಲವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.  ಅದೇ ರೀತಿ ಕೆ.ಎಸ್‌.ಬಸವಂತಪ್ಪ, ಡಿ. ಬಸವರಾಜ, ಎಚ್‌.ದುಗ್ಗಪ್ಪ   ಡಾ.ವೈ ರಾಮಪ್ಪ ಸೇರಿ ಹಲವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. 75 ವರ್ಷ ದಾಟಿದವರಿಗೆ ಟಿಕೆಟ್‌ ಇಲ್ಲ ಎಂಬ ಬಿಜೆಪಿಯ ಅಲಿಖಿತ ನಿಯಮ ಅನ್ವಯವಾದರೆ ವಿರುಪಾಕ್ಷಪ್ಪ ಪುತ್ರ ಮಾಡಾಳ್‌ ಮಲ್ಲಿಕಾರ್ಜುನ ಸ್ಪರ್ಧೆಗೆ ತಾಲೀಮು ನಡೆಸಿದ್ದಾರೆ.   ಕಾಂಗ್ರೆಸ್ಸಿನಿಂದ ವಡ್ನಾಳ್‌ ರಾಜಣ್ಣ ಹೆಸರು ಕೇಳಿಬರ್ತಿದೆ. ಜೆಡಿಎಸ್‌ನಿಂದ ಇಲ್ಲಿ ಎಂ.ಯೋಗೇಶ ಪ್ರಬಲ ಆಕಾಂಕ್ಷಿ. ಹೊನ್ನಾಳಿಯಲ್ಲಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಸ್ಪರ್ಧೆ ಸ್ಪಷ್ಟ.  
 

24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more