Apr 7, 2023, 12:46 PM IST
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಹೀಗಾಗಿ ಜೆಡಿಎಸ್ 123 ಸ್ಥಾನ ಗೆಲ್ಲಲು ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ ವರುಣಾ ಕ್ಷೇತ್ರದ JDS ಅಭ್ಯರ್ಥಿಅಭಿಷೇಕ್ ಕಾಣೆಯಾಗಿದ್ದು, ಅಭಿಷೇಕ್ ನಡೆಯಿಂದ ಜೆಡಿಎಸ್ ಕಾರ್ಯಕರ್ತರು ಕಂಗಲಾಗಿದ್ದಾರೆ. ಹೀಗಾಗಿ ಈ ಬಗ್ಗೆ ಪಕ್ಷದ ಮುಖಂಡರನ್ನು ಕೇಳಿದರು ಸರಿಯಾದ ಉತ್ತರ ಬಾರದಿದ್ದು, ವರಿಷ್ಠರಿಗೆ ದೂರು ನೀಡಲು JDS ಕಾರ್ಯಕರ್ತರು ಮುಂದಾಗಿದ್ದಾರೆ. ಇನ್ನು ಜೆಡಿಎಸ್ ಮೊದಲ ಪಟ್ಟಿಯಲ್ಲೇ ವರುಣ ಅಭ್ಯರ್ಥಿ ಘೋಷಣೆ ಆಗಿದ್ದರು ಇದುವರೆಗೆ ಒಂದು ಕ್ಷೇತ್ರದಲ್ಲೂ ಅಭಿಷೇಕ್ ಸಭೆ ನಡೆಸಲಿಲ್ಲ. ಪೋನ್ ಮಾಡಿದರು ಅಭಿಷೇಕ್ ಕರೆ ಸ್ವೀಕರಿಸದಿದ್ದು , ತೆರೆ ಮರೆಯಲ್ಲಿ ಸಿದ್ದುಗೆ ಸಹಾಯ ಮಾಡ್ತಿದ್ದಾರ ಎಚ್‌ಡಿಕೆ ಎನ್ನುವ ಅನುಮಾನ ಮೂಡಿದೆ .