ಮತದಾನಕ್ಕೆ ಕ್ಷಣಗಣನೆ: ಭದ್ರತೆಗೆ 1,56,000 ಪೋಲಿಸರ ನಿಯೋಜನೆ..!

May 9, 2023, 11:06 AM IST

ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ  ಪ್ರಚಾರ ಸೋಮವಾರ ಸಂಜೆಯೇ ಮುಗಿದಿದೆ.ಮತದಾನಕ್ಕೆ ಇನ್ನು ಒಂದು ದಿನ ಬಾಕಿ ಇದ್ದು  ಭದ್ರತೆಗಾಗಿ 1,56,000 ಪೋಲಿಸರನ್ನು ನಿಯೋಜನೆ ಮಾಡಲಾಗಿದೆ. 304 ಡಿ ವೈಎಸ್‌ ಪಿ,  991 ಪಿಐ,   2610 ಪಿಎಸ್‌ಐ,  5803 ಎಎಸ್‌ಐ 46,421 ಪಿಸಿ  ಹಾಗೇ 84,119 ಸಿಬ್ಬಂದಿಯನ್ನು  ನಿಯೊಜನೆ ಮಾಡಲಾಗಿದೆ. ಅದಲ್ಲದೆ 8,500 ಮಂದಿ ಹೊರ ರಾಜ್ಯದ ಪೋಲಿಸರು ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಇನ್ನು ಒಟ್ಟು 58,282 ಮತಗಟ್ಟೆಗಳಿದ್ದು, 11,617 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.