Dec 1, 2022, 2:16 PM IST
ಮೈಸೂರಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸಿದ್ದರಾಮಯ್ಯ ಅವರು ವರುಣಾ ಅಥವಾ ಚಾಮುಂಡೇಶ್ವರಿ ಕ್ಷೇತ್ರದ ಆಯ್ಕೆಯಲ್ಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಯನ್ನೇ ಸಲೀಸಾಗಿ ಸೋಲಿಸಿದ್ದ ದಳಪತಿ ಜಿಟಿ ದೇವೇಗೌಡ ವಿರುದ್ಧ, ಸ್ವಪಕ್ಷದ ಬಂಡಾಯ ಶುರುವಾಗಿದೆ. ಚಾಮುಂಡೇಶ್ವರಿ ಹಾಲಿ ಶಾಸಕ ಜಿಟಿಡಿಯನ್ನ ಸೋಲಿಸೋ ವ್ಯೂಹ ಸಿದ್ಧವಾಗ್ತಾ ಇದೆ. ಇದು ಸಿದ್ದು ಪಾಲಿಗೆ ಸಿಹಿ ಸುದ್ದಿ ಆದರೂ ಅಚ್ಚರಿಯಿಲ್ಲ. ಇನ್ನೊಂದೆಡೆ ವರುಣಾಕ್ಕೆ ಬನ್ನಿ ಅಂತ ಯತೀಂದ್ರ ಅವರು ತಮ್ಮ ತಂದೆಗೆ ಆಹ್ವಾನ ಕೊಡೋದ್ರ ಹಿಂದೆ ಇನ್ನೊಂದು ಲೆಕ್ಕಾಚಾರವಿದೆ. ಅದು ಕಾಂಗ್ರೆಸ್ಸಿನ ರೂಲ್ಸ್ ಕೂಡ ಹೌದು. ವರುಣಾ ಕ್ಷೇತ್ರ ತ್ಯಾಗಕ್ಕೆ ಮುಂದಾಗಿರೋ ಯತೀಂದ್ರ ಅವರು ಅಪ್ಪನಿಗಾಗಿ ಆಮಂತ್ರಣ ನೀಡೋಕೆ ಕಾಂಗ್ರೆಸ್'ನ ಸಭೆ ಹಾಗೂ ಅಲ್ಲಿನ ಒಂದು ನಿರ್ಣಯ ಕಾರಣ ಅಂತಲೇ ಹೇಳಲಾಗ್ತಾ ಇದೆ.