ಮಂಡ್ಯದಲ್ಲಿ ಮತ್ತೆ ಮರುಕಳಿಸುತ್ತಾ ಐತಿಹಾಸಿಕ ಚುನಾವಣೆ ಎಂಬ ಚರ್ಚೆ ಶುರುವಾಗಿದ್ದು, ವಿಧಾನಸಭಾ ಅಖಾಡಕ್ಕೆ ಎಂಟ್ರಿ ಕೊಡಲು ಸುಮಲತಾ ಅಂಬರೀಶ್ ರೆಡಿಯಾಗಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಅಂಬರೀಷ್ ಕ್ಷೇತ್ರದಿಂದಲೇ ಕಣಕ್ಕಿಳೀತಾರಾ ಸಂಸದೆ ಸುಮಲತಾ ಎಂಬ ಪ್ರಶ್ನೆ ಮೂಡಿದೆ. ಹನಕೆರೆ ಶಶಿ, ಬೇಲೂರರ್ ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸ್ಪರ್ಧೆ ಹಾಗೂ ಪಕ್ಷ ಸೇರ್ಪಡೆ ಬಗ್ಗೆ ಬೆಂಬಲಿಗರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಜನಾಭಿಪ್ರಾಯ ಆಧರಿಸಿ ಸುಮಲತಾ ಮುಂದಿನ ನಿರ್ಧಾರ ಪ್ರಕಟಿಸಿದ್ದಾರೆ.