ಬಿಬಿಎಂಪಿ ಕಾರ್ಪೋರೇಟರ್‌ಗೆ ಕೆಜಿಎಫ್‌ ಬಿಜೆಪಿ ಟಿಕೆಟ್‌ ..!

Apr 4, 2023, 12:28 PM IST

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಹೀಗಾಗಿ  KGF ವಿಧಾನಸಭಾ ಕ್ಷೇತ್ರಕ್ಕೆ  ರೂಪ ಶಶಿಧರ್‌ಗೆ ಟಕ್ಕರ್‌ ಕೊಡಲು ಬಿಜೆಪಿ ಮಾಜಿ  ಕಾರ್ಪೋರೇಟರ್‌ಗೆ ಮಣೆ ಹಾಕಿದೆ.   ಲಕ್ಷ್ಮಿ ದೇವಿನಗರ ವಾರ್ಡ್‌ ಮಾಜಿ ಸದಸ್ಯ ವೇಲು ನಾಯ್ಕರ್‌ಗೆ  ಬಹುತೇಕ ಬಿಜೆಪಿ ಟಿಕೆಟ್‌ ಖಚಿತವಾಗಿದೆ.  ಚುನಾವಣಾ ತಂತ್ರಗಾರರ ಸಲಹೆ ಮೇರೆಗೆ ವೇಲುಗೆ ಟಿಕೆಟ್‌  ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.  ವೇಲು ನಾಯ್ಕರ್‌ ಸಚಿವ ಮುನಿರತ್ನ ಆಪ್ತರಾಗಿದ್ದು, ಮುನಿರತ್ನ ಜೊತೆ ಕಾಂಗ್ರೆಸ್‌ ತೊರೆದಿದ್ದರು.