ರಾಜ್ಯದಲ್ಲಿ ಎರಡು ದಿನ ಅಮಿತ್ ಶಾ ಪ್ರವಾಸ: ಬಿಜೆಪಿ ನಾಯಕರ ಜೊತೆ ಹೈವೋಲ್ಟೇಜ್ ಮೀಟಿಂಗ್?

Dec 27, 2022, 11:42 AM IST

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ಎರಡು ದಿನ ರಾಜ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲನೇ ದಿನ ಮಂಡ್ಯ ಹಾಗೂ ಎರಡನೇ ದಿನ ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್‌ 29 ಹಾಗೂ 30ರಂದು ರಾಜ್ಯದಲ್ಲಿ ಅಮಿತ್‌ ಶಾ ಸಂಚಾರ ಮಾಡಲಿದ್ದು, ಈ ವೇಳೆ ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೂರು ಕ್ಷೇತ್ರದ ಆರೇಳು ಸಾವಿರ ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ.