ಕೋಲಾರದಲ್ಲಿ ಸಿದ್ದರಾಮಯ್ಯ ಹರಕೆಯ ಕುರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಕೋಲಾರ ಕ್ಷೇತ್ರ ಸಿದ್ದರಾಮಯ್ಯಗೆ ಸೇಫ್ ಅಲ್ಲ, ಅವರನ್ನು ಕೋಲಾರದಲ್ಲಿ ದೇವರೇ ಕಾಪಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು. ಕೋಲಾರದಲ್ಲಿ ಸುತ್ತಾಡಿ ಜನರ ಭಾವನೆಯನ್ನು ತಿಳಿದುಕೊಂಡಿದ್ದೀನಿ. ಸಿದ್ದರಾಮಯ್ಯ ಅವರಿಗೆ ಮನಸ್ಸು ಇಲ್ಲ, ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ. ಅವರು ಹರಕೆಯ ಕುರಿ ಆಗುತ್ತಾರೆ ಎಂದರು. ಇನ್ನು ಈ ಕುರಿತು ಸಿ.ಟಿ ರವಿ ಕೂಡ ಮಾತನಾಡಿದ್ದು, ಸ್ವಂತ ಜಿಲ್ಲೆ ಮೈಸೂರಿನಲ್ಲೇ ಗೆಲ್ಲುವ ವಿಶ್ವಾಸವಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಇನ್ನೊಮ್ಮೆ ನಿಂತು ಗೆದ್ದು ಬರುವ ವಿಶ್ವಾಸವಿಲ್ಲ ಎರಡು ಕಡೆ ಸೋತು ಬಿಡುತ್ತೇನೆ ಎನ್ನುವ ಹೆದರಿಕೆಯಿಂದ ಕೋಲಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.