Apr 5, 2023, 12:47 PM IST
ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣ ಶುರುವಾಗಿದ್ದು, . ಒಂದು ಕಡೆ ತಂದೆ ಗೆಲುವಿಗೆ ಮಗ ಶಪಥ ಮಾಡಿದರೆ ಮತ್ತೊಂದು ಕಡೆ ಮಗನಿಗಾಗಿ ತಂದೆ ಮತ ಶಿಕಾರಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಆದರೆ ವರುಣಾ ಕದನ ಕುತೂಹಲ ಕೆರಳಿಸಿದ್ದು ಸಿದ್ದರಾಮಯ್ಯ ಸ್ಪರ್ದೆ ಮಾಡುತ್ತಿರುವುದಕ್ಕೆ ಅಲ್ಲ, ಮಾಜಿ ಸಿ ಎಮ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರುಣಾದಿಂದ ಸ್ಪರ್ಧಿಸ್ತಾರೆ ಎನ್ನವ ಸುದ್ದಿಯಿಂದ ವರುಣ ಅತಿರಥರ ಅಖಾಡವಾಗಿ ಬದಲಾಗಿದೆ. ವರುಣಾ ಸಿದ್ದರಾಮಯ್ಯ ಭದ್ರಕೋಟೆ.. ಅಲ್ಲಿ ಈಗ ಸಿದ್ದು ಸುಪುತ್ರ ಯತೀಂದ್ರ ಶಾಸಕರಾಗಿದಾರೆ. ಅದೇ ಕ್ಷೇತ್ರದಿಂದ ಈಗ ಸಿದ್ದರಾಮಯ್ಯ ಕಣಕ್ಕಿಳೀತಿದಾರೆ. ಶಿಕಾರಿಪುರ ಯಡಿಯೂರಪ್ಪ ರಾಜಕೀಯ ಜನ್ಮ ನೀಡಿದ ಕ್ಷೇತ್ರವಾದ್ರೆ, ವರುಣಾ ವಿಜಯೇಂದ್ರ ಪಾಲಿಗೆ ರಾಜಕೀಯ ಜೀವನ ಕಲ್ಪಿಸಿಕೊಟ್ಟ ಕ್ಷೇತ್ರ. ಹಾಗಾದರೆ ತಂದೆ ಮಕ್ಕಳ ಕತೆ ಏನು..? ಟಿಕೆಟ್ ಕೋಲಾಹಲ ತಪ್ಪಿಸಲು ತ್ಯಾಗಕ್ಕೂ ಬದ್ಧರಾಗಿದ್ಯಾರು?ಮಕ್ಕಳಿಗಾಗಿ ಹೇಗೆ ನಡೀತಿದೆ ಗೊತ್ತಾ ಸೀಕ್ರೆಟ್ ಪಾಲಿಟಿಕ್ಸ್ ಈ ವಿಡಿಯೋ ನೋಡಿ