Dec 20, 2022, 4:00 PM IST
ಕರ್ನಾಟಕದಲ್ಲಿ ವಿಧಾನಸಭೆ ಕುರುಕ್ಷೇತ್ರಕ್ಕೆ ಕಾಂಗ್ರೆಸ್ ಶಸ್ತ್ರಾಭ್ಯಾಸ ಆರಂಭಿಸಿದೆ. ಆದ್ರೆ ಕಾಂಗ್ರೆಸ್'ಗೆ ಆಂತರಿಕ ಜಗಳವೇ ಮಗ್ಗಲು ಮುಳ್ಳಾಗಿ ಕಾಡ್ತಿದೆ. ಯಾರೂ ಟಿಕೆಟ್ ಘೋಷಣೆ ಮಾಡಕೂಡದು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ರೆ, ಸಿದ್ದು ಬಣ ಮಾತ್ರ, ಡಿಕೆಶಿ ಹಾಗೂ ಹೈಕಮಾಂಡ್ ಹಾಕಿದ ಗೆರೆಯನ್ನು ದಾಟಿ, ಜಿಲ್ಲೆ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಲೇ ಟಿಕೆಟ್ ಘೋಷಣೆ ಮಾಡ್ತಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಮಾತ್ರ ಅಭ್ಯರ್ಥಿಗಳ ಹೆಸರುಗಳನ್ನು ಅನೌನ್ಸ್ ಮಾಡ್ತಿದ್ರು, ಆದ್ರೆ ಈಗ ಇವರೊಟ್ಟಿಗೆ ಜಮೀರ್ ಕೂಡ ಸೇರಿಕೊಂಡು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡ್ತಿದ್ದಾರೆ. ಈ ಬೆಳವಣಿಗೆ ಸರಿಯಲ್ಲ ಅಂತ ಸಿದ್ದು ಬಣದಲ್ಲಿದ್ದವರೇ ಹೇಳ್ತಿದ್ದಾರೆ. ಹಾಗೂ ಈ ಕುರಿತು ಡಿಕೆಶಿ ಖಡಕ್ ಉತ್ತರ ಕೊಟ್ಟಿದ್ದಾರೆ.