ಗುಜರಾತ್ ಬಳಿಕ ರಾಜ್ಯದಲ್ಲಿ ಚುನಾವಣಾ ತಂತ್ರಗಾರಿಕೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಬಿಜೆಪಿ ಚಾಣಕ್ಯ ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆ. ಮೂರು ದಿನ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದು, ಡಿ. 29ರ ರಾತ್ರಿಯೇ ಬೆಂಗಳೂರಿಗೆ ಆಗಮಿಸಲಿದ್ದಾರೆ. ಡಿಸೆಂಬರ್ 30ರ ಬೆಳಗ್ಗೆ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿ ಬಳಿಕ ಮಂಡ್ಯದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಂಡ್ಯ ಮೆಗಾ ಡೈರಿ ಅಮಿತ್ ಶಾ ರಿಂದ ಉದ್ಘಾಟನೆಯಾಗಲಿದ್ದು, ನಂತರ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು. ಬೆಂಗಳೂರು ಅರಮನೆ ಮೈದಾನದಲ್ಲಿ ಸಹಕಾರಿ ಸಪ್ತಾಹ ನಡೆಯಲಿದೆ. ಡಿ 30ರಂದು ರಾತ್ರಿ ಬಿಜೆಪಿ ಪ್ರಮುಖರೊಂದಿಗೆ ಚರ್ಚೆ ನಡೆಸಿ, ಡಿ.ರಂದು ಬೆಳಗ್ಗೆ ನಾಯಕರೊಂದಿಗೆ ಬ್ರೆಕ್‌ಫಾಸ್ಟ್ ಸಭೆ ನಡೆಸಿ, ದೇವನಹಳ್ಳಿಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ. ನಂತರ ಮಲ್ಲೇಶ್ವರಂ ಸೌಹಾರ್ದ ಸಹಕಾರಿ ಫೆಡರೇಶನ್‌ಗೆ ಭೇಟಿ ನೀಡಿ, ಬೂತ್ ಮಟ್ಟದ ಅಧ್ಯಕ್ಷರು ಏಜೆಂಟ್‌ರೊಂದಿಗೆ ಶಾ ಸಭೆ ನಡೆಸಲಿದ್ದಾರೆ.