Feb 9, 2022, 10:48 AM IST
ಬೆಂಗಳೂರು(ಫೆ.09): 2023 ರ ಸಾರ್ವತ್ರಿಕ ಚುನಾವಣೆಗೆ ಕರುನಾಡು ಸಜ್ಜಾಗುತ್ತಿದೆ. ಚುನಾವಣೆಗೂ ಮುನ್ನವೇ ಮತ್ತೊಂದು ಮಹಾಮೈತ್ರಿಗೆ ಸಿದ್ಧತೆ ನಡೆದಿದೆ. ಕನ್ನಡ ಸಂಘಗಳ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿದೆಯಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ರಾಷ್ಟ್ರೀಯ ಪಕ್ಷಗಳಿಂದ ನೆಲ, ಜಲ, ಇತ್ಯಾದಿ ವಿಚಾರದಲ್ಲಿ ಕಡುನಾಡಿಗೆ ಅನ್ಯಾಯವಾಗಿದೆಯಾ?, ಹೀಗಾಗಿ ಕನ್ನಡ ಸಂಘಟನೆಗಳು ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಈ ಸಂಬಂಧ ಕನ್ನಡಪರ ಸಂಘಟನೆಗಳ ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು(ಬುಧವಾರ) ಸಂವಾದ ನಡೆಸಲಿದ್ದಾರೆ. ಜೆಡಿಎಸ್ ಜತೆಗೂಡಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯೂ ಕೂಡ ಸಭೆಯಲ್ಲಿ ಚರ್ಚೆಯಾಗಲಿದೆ.
Hijab Row ಹಿಜಾಬ್-ಕೇಸರಿ ವಿವಾದ, ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಬೊಮ್ಮಾಯಿ