ಗಣಿಧಣಿಗೆ ಹೊಸ ಟೆನ್ಷನ್: 'ಸ್ನೇಹ ಹಸ್ತ' ಚಿಹ್ನೆ ನೀಡಲು ಚು.ಆಯೋಗ ನಕಾರ

Mar 19, 2023, 11:24 AM IST

ಗಣಿಧಣಿಗೆ ಜನಾರ್ದನ ರೆಡ್ಡಿಗೆ ಹೊಸ ಪಕ್ಷ ಚಿಹ್ನೆ ಟೆನ್ಷನ್‌ ಶುರು ಆಗಿದ್ದು,  ಸ್ನೇಹ ಹಸ್ತದ ಚಿಹ್ನೆ ಪಡೆಯಲು ಜನಾರ್ದನ ರೆಡ್ಡಿ ಹೋರಾಟ ಮಾಡುತ್ತಿದ್ದಾರೆ.  ಪರಸ್ಪರ ಎರಡು ಕೈ ಜೋಡಿಸಿರುವ ಚಿಹ್ನೆ ಪಡೆಯಲು ರೆಡ್ಡಿ ಕಸರತ್ತು  ಮಾಡುತ್ತಿದ್ದು, ಬೇಡಿಕೆಗೆ ಚುನಾವಣಾ ಆಯೋಗ ಹಿಂದೇಟು ಹಾಕಿದೆ. ಇನ್ನು 1 ತಿಂಗಳಿಂದ 'ಕೈ ಜೋಡಿಸುವ' ಚಿಹ್ನೆಗಾಗಿ ರೆಡ್ಡಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಬೇರೆ ಬೇರೆ ಚಿಹ್ನೆಗಳನ್ನು ಆಯೋಗದ ಅಧಿಕಾರಿಗಳು ಸೂಚಿಸಿದ್ದಾರೆ. 25 ಹೊಸ ಚಿಹ್ನೆಗಳನ್ನು ಸೂಚಿಸಿರುವ ಕೇಂದ್ರ ಚುನಾವಣಾ ಆಯೋಗ.,ಮಾರ್ಚ್‌ ಅಂತ್ಯಕ್ಕೆಲ್ಲ KRPP ಚಿಹ್ನೆ ಅಂತಿಮಗೊಳ್ಳುವ ಸಾಧ್ಯತೆಯಿದೆ .