ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಮೇಲುಗೈ ಸಾಧಿಸುವ ಪಕ್ಷ ಯಾವುದು? ಬಿಜೆಪಿ ಕಸರತ್ತು ವರ್ಕೌಟ್ ಆಗಿದೆಯಾ? ಈ ಕುರಿತು ಜನ್ ಕಿ ಬಾತ್ ಸುವರ್ಣ ನ್ಯೂಸ್ ಸಮೀಕ್ಷೆ ವರದಿ ಲೆಕ್ಕಾಚಾರ ಇಲ್ಲಿದೆ.
ಹಳೇ ಮೈಸೂರು ಗೆಲ್ಲಲು ಬಿಜೆಪಿ ಭಾರಿ ಕಸರತ್ತು ನಡೆಸಿದೆ. ಆದರೆ ಇದು ಸ್ಥಾನವಾಗಿ ಪರಿವರ್ತನೆಯಾಗಿಲ್ಲ. ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆಯಲ್ಲಿ ಹಳೇ ಮೈಸೂರು ಭಾಗದ ಪಕ್ಕಾ ಲೆಕ್ಕ ನೀಡಿದೆ. ಹಳೇ ಮೈಸೂರು ಕಾಂಗ್ರೆಸ್ ಹಾಗೂ ಜೆಡಿಎಸ್ ಅತೀ ಹೆಚ್ಚು ಸ್ಥಾನ ಗೆಲ್ಲುವ ಕ್ಷೇತ್ರ. ಆದರೆ ಈ ಬಾರಿ ಬಿಜೆಪಿ ಒಂದಷ್ಟು ಸ್ಥಾನ ಗೆಲ್ಲಲು ಪ್ಲಾನ ರೆಡಿ ಮಾಡಿದೆ. ಆದರೆ ಈ ಲೆಕ್ಕಾಚಾರ ಸಂಪೂರ್ಣ ಸಫಲವಾಗಿಲ್ಲ. ಹಳೇ ಮೈಸೂರಿನಲ್ಲಿ ಈ ಬಾರಿ ಬಿಜೆಪಿ 12 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 23 ಸ್ಥಾನ ಗೆದ್ದರೆ, ಜೆಡಿಎಸ್ 22 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.