Apr 14, 2023, 8:24 PM IST
ಬೆಂಗಳೂರು(ಏ.14): ಈ ಬಾರಿಯಾ ವಿಧಾನಸಭಾ ಚುನಾವಣೆಯಲ್ಲೂ ಕಲ್ಯಾಣ ಕರ್ನಾಟಕ ಬಿಜೆಪಿಗೆ ಕಬ್ಬಿಣಡ ಕಡಲೆಯಾಗಿದೆ.ಒಟ್ಟು 40 ಕ್ಷೇತ್ರಗಳ ಬೈಕಿ ಕಾಂಗ್ರೆಸ್ 23 ಸ್ಥಾನಗಳನ್ನು ಗೆಲ್ಲಲಿದೆ ಎಂದು ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆ ಹೇಳುತ್ತಿದೆ. ಆದರೆ ಬಿಜೆಪಿ 2018ರ ವಿಧಾಸಭಾ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ, ಪ್ರಗತಿ ಸಾಧಿಸಿದೆ. ಕಾರಣ ಕಳೆದ ಬಾರಿ 15 ಸ್ಥಾನ ಗೆದ್ದುಕೊಂಡಿತ್ತು. ಇದೀಗ ಸಮೀಕ್ಷೆಯಲ್ಲಿ ಬಿಜೆಪಿ 16 ಸ್ಥಾನ ಗೆಲ್ಲಲಿದೆ ಎಂದು ಹೇಳುತ್ತಿದೆ. ಜೆಡಿಎಸ್ 4 ಕ್ಷೇತ್ರ ಗೆಲ್ಲಲಿದೆ ಎಂದಿದೆ.