ಸಭೆಯ ಇನ್‌ಸೈಡ್ ಡೀಟೆಲ್ಸ್: KPCC ಅಧ್ಯಕ್ಷ, ವಿಪಕ್ಷ ನಾಯಕನ ಹೆಸರು ಫೈನಲ್..!

Jan 5, 2020, 5:56 PM IST

ಬೆಂಗಳೂರು, [ಜ.05]:  ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ರಾಜ್ಯ ಕಾಂಗ್ರೆಸ್ನಲ್ಲಿ ದಂಡನಾಯಕನಿಲ್ಲದೆ ಸೊರಗುತ್ತಿದೆ. ಇಬ್ಬರ ರಾಜೀನಾಮೆಯನ್ನೂ ಹೈಕಂಮಾಡ್ ಅಂಗೀಕಾರಿಸದೇ ತಟಸ್ಥವಾಗಿಟ್ಟಿದೆ. ಆದ್ರೆ, ಆಕಾಂಕ್ಷಿಗಳ ಲಾಭಿ ಮಾತ್ರ ಜೋರಾಗಿಯೇ ನಡೀತಿದೆ. 

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಡಿಕೆ ಶಿವಕುಮಾರ್ ಕಟ್ಟಿ ಹಾಕಲು ಸಿದ್ದರಾಮಯ್ಯ ಹೊಸ ತಂತ್ರ

ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಬಗ್ಗೆ ಸೋನಿಯಾಗಾಂಧಿ ಸೂಚನೆ ಮೇರೆಗೆ ಶನಿವಾರ ಹಿರಿಯ ನಾಯಕರ ಸಭೆ ನಡೀತು. ಮಾಜಿ ಡಿಸಿಎಂ ಜಿ.ಪರಮೇಶ್ವರ್ ನಿವಾಸದಲ್ಲಿ ಶನಿವಾರ ಸಂಜೆ ಕಾಂಗ್ರೆಸ್‌ ಹಿರಿಯ ನಾಯಕ, ವರಿಷ್ಠ ಬಳಗದಲ್ಲಿ ಗುರುತಿಸಿಕೊಂಡಿರುವ ಗುಲಾಮ್‌ ನಬಿ ಅಜಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಭಾಗಿಯಾಗಿದ್ರು. 

ಕಾಂಗ್ರೆಸ್‌ನಲ್ಲಿ 'ಸಂ'ಕ್ರಾಂತಿ: ಕುತೂಹಲ ಮೂಡಿಸಿದ ಸಿದ್ದು ಡಿಕೆಶಿ ಭೇಟಿ

ಈ ವೇಳೆ ನಾಯಕರ ಅಭಿಪ್ರಾಯಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನನ್ನು ಫೈನಲ್ ಮಾಡಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ಸಭೆಯ ಇನ್‌ಸೈಡ್ ಡಿಟೇಲ್ಸ್ ಲಭ್ಯವಾಗಿವೆ. ಆ ಇನ್‌ಸೈಡ್ ಡೀಟೆಲ್ಸ್ ವಿಡಿಯೋನಲ್ಲಿದೆ ನೋಡಿ.