ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?

ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?

Published : Oct 18, 2023, 02:00 PM IST

ಬಿಜೆಪಿ ದೋಸ್ತಿಯಿಂದ ಜೆಡಿಎಸ್ ಪಾಳೆಯದಲ್ಲಿ ಭೂಕಂಪ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಜೆಡಿಎಸ್‌ ಕೂಡ ಇಬ್ಭಾಗವಾಗುತ್ತಾ? ಎಂಬ ಅನುಮಾನ ಕಾಡುತ್ತಿದೆ.

ಬಿಜೆಪಿ ದೋಸ್ತಿಯಿಂದ ಜೆಡಿಎಸ್ ಪಾಳೆಯದಲ್ಲಿ ಭೂಕಂಪ.. ಜೆಡಿಎಸ್‌ನಲ್ಲಿ ಬಂಡಾಯದ ಝಂಡಾ ಹಾರಿಸಿದ್ರು ಪಕ್ಷದ ರಾಜ್ಯಾಧ್ಯಕ್ಷ..! ಕುಮಾರಸ್ವಾಮಿಯವರನ್ನೇ ಪಕ್ಷದಿಂದ ಹೊರ ಹಾಕ್ತೀನಿ ಅಂತ ಅಬ್ಬರಿಸಿದ ಅಧ್ಯಕ್ಷ..! ನಮ್ಮದು ಒರಿಜಿನಲ್ ಜೆಡಿಎಸ್ ಅಂತ ದೇವೇಗೌಡರ ಕುಟುಂಬಕ್ಕೇ ಸವಾಲ್ ಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷ.. ಅಷ್ಟಕ್ಕೂ ಜೆಡಿಎಸ್ ಯಾರ ಪಕ್ಷ..? ದೇವೇಗೌಡರದ್ದಾ? ಸಿ.ಎಂ ಇಬ್ರಾಹಿಂರದ್ದಾ..? ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ  ಒಡೆದು ಎರಡು ಹೋಳಾಗಲಿದ್ಯಾ ಜೆಡಿಎಸ್..?

ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ, ನಮ್ಮದು ಅಂತಿದ್ದಾರೆ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ. ಪಕ್ಷದ ನಾಯಕತ್ವಕ್ಕೇ ಸಡ್ಡು ಹೊಡೆದಿರೋ ಇಬ್ರಾಹಿಂ, ಹೊಸ ಕೋರ್ ಕಮಿಟಿ ರಚಿಸಲು ಮುಂದಾಗಿದ್ದಾರೆ. ಇದ್ರ ಮಧ್ಯೆ ಜೆಡಿಎಸ್'ನಲ್ಲಿ ಇಬ್ರಾಹಿಂ ನಾಮಕಾವಸ್ತೆ ಅಧ್ಯಕ್ಷ ಅಂದಿದ್ದಾರೊಬ್ಬ ಬಿಜೆಪಿ ನಾಯಕ. ಜನತಾ ಪರಿವಾರರದ ಅಂತರ್ಯುದ್ದದಿಂದಲೇ ಜನ್ಮ ಪಡೆದ ಜೆಡಿಎಸ್'ನಲ್ಲೀಗ ಐತಿಹಾಸಿಕ ಅಂತಯುದ್ಧ. ಪಕ್ಷದ ಪರಮೋಚ್ಛ ನಾಯಕ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಮರ ಕಹಳೆ ಮೊಳಗಿಸಿದ್ದಾರೆ. ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ, ನಮ್ಮದು ಅಂತಿದ್ದಾರೆ. ಸಮಾನ ಮನಸ್ಕರ ಸಭೆ ಕರೆದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ.

ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ಬೇರೆ ಪಕ್ಷಗಳ ನಾಯಕರೂ ಇದ್ರು. ಅಷ್ಟಕ್ಕೂ ಜೆಡಿಎಸ್ ಸಭೆಯಲ್ಲಿದ್ದ ಅನ್ಯಪಕ್ಷಗಳ ಲೀಡರ್'ಗಳು ಯಾರು..? ಅವ್ರು ಅಲ್ಲಿಗೆ ಬಂದದ್ದೇಕೆ..? ಅಷ್ಟಕ್ಕೂ ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ಉಪಸ್ಥಿತರಿದ್ದ ಬೇರೆ ಪಕ್ಷಗಳ ನಾಯಕರು ಯಾರು..? ಹಾಗಾದ್ರೆ ಶಿವಸೇನೆಯ ರೀತಿಯಲ್ಲೇ ಜೆಡಿಎಸ್ ಇಬ್ಭಾಗವಾಗುತ್ತಾ..? ಜೆಡಿಎಸ್‌ ಅನ್ನು ಒಡೆಯುವ ಶಕ್ತಿ ಸಿ.ಎಂ ಇಬ್ರಾಹಿಂ ಅವರಿಗಿದ್ಯಾ..? ಖಂಡಿತಾ ಇಲ್ಲ ಅನ್ನೋದು ಜೆಡಿಎಸ್ ಪಾಳೆಯದಿಂದ ಸಿಗ್ತಿರೋ ರೆಡಿ ಮೇಡ್ ಉತ್ತರ.

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
Read more