Jul 5, 2023, 6:58 PM IST
ಬೆಂಗಳೂರು (ಜು.05): ನಾನು ರಾಜಕಾರಣಕ್ಕೆ ಬರುವ ಮುಂಚೆ ರೌಡಿಗಳಿಗೆ ಬಾಟಲಿಗಳನ್ನು ಕೊಟ್ಟು ಬಂದಿಲ್ಲ, ಹಳ್ಳಿಗಳ ಟೆಂಟ್‌ನಲ್ಲಿ ಬ್ಲೂಫಿಲಂ ತೋರಿಸಿ ಬಂದವನಲ್ಲ. ಕಷ್ಟಪಟ್ಟು ಜೀವನವನ್ನು ಮಾಡಿ ಮೇಲಕ್ಕೆ ಬಂದವನು. ನನ್ನ ಬಗ್ಗೆ ಮಾತನಾಡುವಾಗ ಇತಿಮಿತಿ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ವರ್ಗಾವಣೆ ಮಾಡಿದ ಬಗ್ಗೆ ಗೊತ್ತಿದೆ. ಬೆಂಗಳೂರಿನಲ್ಲಿ ಸುರಂಗ ಮಾರ್ಗ (ಟನಲ್ ನಿರ್ಮಾಣ) ಮಾಡುವುದಕ್ಕೆ ಮುಂದಾಗಿ ಸ್ಮಶಾನ ಮಾಡಬೇಡಿ. ಈಗಾಗಲೇ ಬೆಂಗಳೂರನ್ನು 1999ರಿಂದ ಯಾವ ರೀತಿ ಸ್ಮಶಾನ ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರು ಈಗಾಗಲೇ ಅಭಿವೃದ್ಧಿ ವಿಚಾರದಲ್ಲಿ ಸಮಾಧಿಯಾಗಿದೆ. ಬೆಂಗಳೂರು ಸಮಸ್ಯೆಗೆ ವೈಜ್ಞಾನಿಕ ರೀತಿಯಲ್ಲಿ ಕೆಲ್ಸ ಮಾಡಿ. ಟನಲ್ ಮಾಡಿಸೋಕೆ ಹೋಗೋಕೆ ಬೆಂಗಳೂರು ಹಾಳ್ ಮಾಡಬೇಡಿ ಎಂದು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ.