Oct 28, 2019, 5:30 PM IST
ಕನಕಪುರ (ಅ.28): ಸುಮಾರು 2 ತಿಂಗಳ ಬಳಿಕ ಡಿ.ಕೆ.ಶಿವಕುಮಾರ್ ತನ್ನ ತವರು ಜಿಲ್ಲೆಗೆ ಭೇಟಿ ನೀಡಿದರು. ಒಂದರ ಹಿಂದೆ ಮತ್ತೊಂದು ದೇವಸ್ಥಾನಗಳಿಗೆ ಭೇಟಿ, ವಿಶೇಷ ಪೂಜೆ, ಜೊತೆಗೆ ಅಭಿಮಾನಿಗಳಿಗೂ ಡಿಕೆಶಿ ದರ್ಶನ ನೀಡಿದರು.
ಈ ವೇಳೆ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಡಿಕೆಶಿ ಮಾತನಾಡಿದರು. ಕೈಯಲ್ಲಿ JDS ಬಾವುಟ ಹಿಡಿದ ಬಗ್ಗೆಯೂ ಸ್ಪಷ್ಟೀಕರಣ ನೀಡಿದ್ರು, ಸಿದ್ದರಾಮಯ್ಯ ತನ್ನ ಬಗ್ಗೆ ಆಡಿದ್ದಾರೆನ್ನಲಾದ ಮಾತುಗಳ ಬಗ್ಗೆಯೂ ಹೇಳಿದ್ರು.
ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ 48 ದಿನಗಳ ಕಾಲ ಜೈಲುವಾಸ ಅನುಭವಿಸಿ, ಜಾಮೀನು ಮೇಲೆ ಹೊರ ಬಂದಿರುವ ಡಿಕೆಶಿಗೆ ಬೆಂಬಲಿಗರು ಭರ್ಜರಿ ಸ್ವಾಗತ ಕೋರುತ್ತಿದ್ದಾರೆ.