May 29, 2023, 11:23 PM IST
ಕಾಂಗ್ರೆಸ್ ಘೋಷಿಸಿರುವ ಉಚಿತ ಗ್ಯಾರೆಂಟಿ ಯೋಜನೆ ಇದೀಗ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆದಿಯಾಗಿ ಕಾಂಗ್ರೆಸ್ ನಾಯಕರು ಎಲ್ಲರಿಗೂ ಫ್ರಿ ಎಂದಿದ್ದರು. ಇದೀಗ ಷರತ್ತು ಅನ್ವಯ ಎಂದಿದ್ದಾರೆ. ಇದೇ ಅಸ್ತ್ರವನ್ನು ಬಿಜೆಪಿ ಹಾಗೂ ಜೆಡಿಎಸ್ ಬಳಸಿಕೊಂಡಿದೆ.ಗ್ಯಾರೆಂಟಿ ಯೋಜನೆಗೆ ಷರತ್ತು ಅನ್ವಯ ಎಂದು ಕಾಂಗ್ರೆಸ್ ನಾಯಕರು, ಸಚಿವರು, ಸಂಪುಟ ಸದಸ್ಯರು ಹೇಳುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಇದು ಜನರಿಗೆ ಮಾಡಿದ ಮೋಸ ಎಂದು ಬಿಜೆಪಿ ಹೇಳಿದೆ. ಸಿದ್ದರಾಮಯ್ಯ ಸರ್ಕಾರದ ಗ್ಯಾರೆಂಟಿ ಯೋಜನೆ ಜಾರಿ ಯಾವಾಗ? ಯಾರಿಗೆಲ್ಲಾ ಸಿಗಲಿದೆ ಗ್ಯಾರೆಂಟಿ, ಷರತ್ತು ಅನ್ವಯವಾಗುತ್ತಾ? ಈ ಪ್ರಶ್ನೆಗಳು ಸರ್ಕಾರಕ್ಕೆ ತೀವ್ರ ತಲೆನೋವಾಗುತ್ತಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸತತ ಸಭೆ ನಡೆಸಿ ಯೋಜನೆ ಜಾರಿಗೆ ಚರ್ಚೆ ನಡೆಸಿದ್ದಾರೆ.