ಮತಾಂತರಕ್ಕೆ ಸರ್ಕಾರದ ಅಂಕುಶ: ಮತಾಂತರ ಕಾಯ್ದೆ ಹೇಳೋದೇನು? ಹೊಸ ನಿಯಮಗಳೇನು?

Sep 17, 2022, 1:38 PM IST

ಬೆಂಗಳೂರು, (ಸೆಪ್ಟೆಂಬರ್.17): ಕರ್ನಾಟಕದಲ್ಲಿ ಮತಾಂತರ ತಡೆ ಕಾಯ್ದೆ ವಿಧೇಯಕ ನಿನ್ನೆ ವಿಧಾನ ಪರಿಷತ್​​ನಲ್ಲಿ ಮಂಡನೆ ಆಯ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಪರಿಷತ್‌ನಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡಿಸಿದ್ದು, ಇದೀಗ ರಾಜ್ಯಪಾಲಕ ಅಂಕಿತವೊಂದೇ ಬಾಕಿ ಇದೆ. ಬಹಳ ಮಹತ್ವದ ಕಾಯ್ದೆಯನ್ನ ಇದೀಗ ರಾಜ್ಯ ಸರ್ಕಾರ ತಂದಿದೆ. 2013ರಲ್ಲಿ ಕಾಂಗ್ರೆಸ್‌ ಸರ್ಕಾರ ಚಿಂತನೆ ನಡೆಸಿತ್ತು.ಈಗ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ವಾಪಾಸ್: ಪ್ರಿಯಾಂಕ್ ಖರ್ಗೆ ಘೋಷಣೆ

ಮತಾಂತರಕ್ಕೆ ಸರ್ಕಾರ ಹಾಕುತ್ತಿದೆ ಅಂಕುಶ.. ಆದ್ರೆ, ಆ ಅಂಕುಶಕ್ಕೆ  ವಿಪಕ್ಷಗಳ ಆಕ್ಷೇಪ ಯಾಕೆ..? ಸರ್ಕಾರದ ಹೊಸ ಕಾಯ್ದೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ನಿಜಕ್ಕೂ ಕುತ್ತು ತರುತ್ತಾ..? ಮತಾಂತರ ನಿಷೇಧ ಕಾಯ್ದೆ ಜಾರಿಯಿಂದ ಬದಲಾಗೋದೇನು..? ಭಯ ಆಗಿರೋದು ಯಾರಿಗೆ..? ಯಾಕೆ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮತಾಂತರ ಮಿಸ್ಟರಿ..!