ಬೆಂಗಳೂರು(ಮಾ.30): ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅಭಿಯಾನ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಶಾಸಕ ಎಂಪಿ ರೇಣುಕಾಚಾರ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಹಿಂದೂಗಳು ಮಾಂಸದ ಅಂಗಡಿ ಇಟ್ಟರೆ ನಾನೇ ಸ್ವತಃ ಧನಸಹಾಯ ಮಾಡುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ. ಹಿಂದೂಗಳು ಎಲ್ಲಾ ವ್ಯಾಪಾರ ಮಾಡಬೇಕು. ನಮಗೆ ಹಲಾಲ್ ಉತ್ಪನ್ನ ಬೇಡ ಎಂದು ರೇಣುಕಾಚಾರ್ಯ ಘೋಷಿಸಿದ್ದಾರೆ.