ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್: ಚೈತ್ರಾ ಮಾದರಿಯಲ್ಲೇ ನಿವೃತ್ತ ಇಂಜಿನಿಯರ್‌ಗೆ ಬಹುಕೋಟಿ ವಂಚನೆ!

Oct 22, 2023, 4:02 PM IST

ವಿಜಯನಗರ (ಅ.22): ರಾಜ್ಯದ ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಹಿಂದೂ ಕಾರ್ಯಕರ್ತೆ ಚೈತ್ರಾ 5 ಕೋಟಿ ಪಡೆದು ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಮಾಡಿದ ಮಾದರಿಯಲ್ಲೇ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಿವೃತ್ತ ಇಂಜಿನಿಯರ್‌ಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಳೆ ನಿಂತ್ರೂ ಅದರ ಹನಿ ನಿಲ್ಲೋದಿಲ್ಲ ಅನ್ನೋ ಮಾತಿನಂತೆ. ವಿಧಾನಸಭೆ ಚುನಾವಣೆ ಮುಗಿದು ಬಿಜೆಪಿ ಸೋತು ಸುಣ್ಣವಾದ ಬಳಿಕವೂ ಚುನಾವಣೆ ವೇಳೆ ಬಿಜೆಪಿಯಲ್ಲಿ ಟಕೆಟ್ ಹಂಚಿಕೆ ವೇಳೆ ನಡೆದ ಗೊಂದಲಗಳ ಕತೆ ಇನ್ನೂ ಮುಗಿಯುತ್ತಲೇ ಇಲ್ಲ.  ಬಿಜೆಪಿ ಟಿಕೆಟ್ ಕೊಡಿಸೋದಾಗಿ ಚೈತ್ರಾ ಕುಂದಾಪುರ ನಡೆಸಿದ ಡೀಲ್ ಮಾದರಿಯಲ್ಲಿ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, ಹಗರಿಬೊಮ್ಮನ ಹಳ್ಳಿ ಟಿಕೆಟ್ ಕೊಡಿಸೋದಾಗಿ ಕೋಟಿ ಕೋಟಿ ಡೀಲ್ ಮಾಡಿ ಪಂಗನಾಮ ಹಾಕಲಾಗಿದೆ. 

ಹಗರಿಬೊಮ್ಮನ ಹಳ್ಳಿ ಟಿಕೆಟ್ ಕೊಡಿಸೋದಾಗಿ ನಿವೃತ್ತ ಎಂಜಿನಿಯರ್ ಗೆ ಎರಡು ಕೊಟಿಗೂ ಹೆಚ್ಚು ವಂಚನೆ… ಚೈತ್ರಾ ಕುಂದಾಪುರ ಪ್ರಕರಣದ ಮಾದರಿಯಲ್ಲಿಯೇ ನಡೆದ ಘಟನೆ… ಹೌದು, ಚುನಾವಣೆ ಸಂಧರ್ಭದಲ್ಲಿ  ಟಿಕೆಟ್ ಹಂಚಿಕೆ ವೇಳೆ ಬಿಜೆಪಿ ಪಕ್ಷದಲ್ಲಿ ನಡೆದ ಒಂದಷ್ಟು ಗೊಂದಲಗಳನ್ನು ಕೆಲ ಬಿಜೆಪಿಯ ಎರಡನೇ ಮತ್ತು ಮೂರನೇ ದರ್ಜೆ ನಾಯಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಕಳೆದ ವರ್ಷ ನಿವೃತ್ತಿ ಹೊಂದಿದ್ದ ಕೊಟ್ಟೂರಿನ ಎಂಜಿನೀಯರ್ ಶಿವಮೂರ್ತಿ ಎನ್ನುವವರು  ಚುನಾವಣೆಯಲ್ಲಿ ಸ್ಪರ್ಧೆ ಮಾಡೋ  ಮೂಲಕ ಸಮಾಜ ಸೇವೆಗೆ ಮುಂದಾಗಿದ್ದರು. 

ಸೈಲೆಂಟ್ ಸಾಹುಕಾರ, ಗಟ್ಟಿಗಿತ್ತಿ ಲಕ್ಷ್ಮಿಗೂ ರಾಜಕೀಯ ದುಷ್ಮನಿ! ಅವತ್ತು ಅಣ್ಣ, ಇವತ್ತು ತಮ್ಮ, ಅಸಲಿ ಆಟ ಶುರುವಾಯ್ತಾ?

ಈ ವೇಳೆ ಬಿಜೆಪಿ ಮಾಜಿ ಮುಖಂಡ ಮತ್ತು ಹಾಲಿ ಕೆಆರ್ಪಿಪಿ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ರೇವಣ್ಣ ಸಿದ್ದಪ್ಪ ಪರಿಚಯವಾಗುತ್ತಾರೆ. ಹಗರಿಬೊಮ್ಮನ ಕ್ಷೇತ್ರದ ಟಿಕೆಟ್ ಕೊಡಿಸೋ ನೆಪದಲ್ಲಿ ಬಿಜೆಪಿಯ ಕೆಲ ನಾಯಕರನ್ನು ಪರಿಚಯ ಮಾಡಿಸುತ್ತಾರೆ. ಟಿಕೆಟ್ ಕೊಡಿಸೋಕೆ ಹಣ ನೀಡಬೇಕೆಂದು ಹೇಳಿ ರೇವಣ ಸಿದ್ದಪ್ಪ ಮತ್ತು ಪುತ್ತೂರಿನ ಶೇಖರ್ ಇಬ್ಬರು ಹಂತ ಹಂತವಾಗಿ ಎರಡು ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಕೊನೆಗೆ ಟಿಕೆಟ್ ಬ್ಯಾಲ ಹುಣಸಿ ರಾಮಣ್ಣ ಅವರಿಗೆ ಸಿಗುತ್ತದೆ. ಈ ವೇಳೆ ಆಕ್ರೋಶಗೊಂಡ ಶಿವಮೂರ್ತಿ ಆಕ್ರೋಶ ವ್ಯಕ್ತಪಡಿಸೋ ಮೂಲಕ ಹಣ ವಾಪಸ್ ಕೇಳ್ತಾರೆ. ಈ ವೇಳೆ ವಾಗ್ವಾದ ನಡೆದು ಗಲಾಟೆಯಾಗಿದೆ. ಆರಂಭದಲ್ಲಿ ವಿಷಯ ಹೊರಗೆ ಹೇಳಿದ್ರೇ,ಎಲ್ಲಿ ಮರ್ಯಾದೆ ಹೋಗ್ತದೆ ಎಂದು ಕೊಟ್ಟೂರಿನ ಕೆಲ ಪ್ರಮುಖರು ರಾಜಿ ಪಂಚಾಯಿತಿ ಮಾಡೋ ಮೂಲಕ ವಿಷಯ ಮುಚ್ಚಿಡಲು ಪ್ರಯತ್ನ ಮಾಡುತ್ತಾರೆ. ಹಣ ವಾಪಸ್ ನೀಡೋ ಭರವಸೆ ನೀಡ್ತಾರೆ.  ಮೂರು ತಿಂಗಳಾದ್ರೂ ಹಣ ನೀಡದ ಹಿನ್ನೆಲೆ ಶಿವಮೂರ್ತಿಯವರು ಇದೀಗ ಕೊಟ್ಟೂರು ಠಾಣೆಯಲ್ಲಿ ದೂರನ್ನು ನೀಡೋ ಮೂಲಕ ವಂಚನೆಯ ವಿವರಣೆ ನೀಡಿದ್ದಾರೆ.