Dec 1, 2020, 11:06 AM IST
ಬೆಂಗಳೂರು (ಡಿ. 01): ಬಿಎಸ್‌ವೈ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಬೇಕೆಂಬ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್‌ಗೆ ನಿರಾಸೆಯಾಗಿದೆ. 2021 ರ ವರೆಗೆ ಸಚಿವರಾಗುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ತೀರ್ಪನ್ನು ಎಚ್. ವಿಶ್ವನಾಥ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತಾರಾ? ಕಾದು ನೋಡಬೇಕಿದೆ.
ನ್ಯೂಸ್ ಅವರ್ : ಐಎಂಎ ಕೇಸ್‌ನಲ್ಲಿ ಜಮೀರ್, ರೋಷನ್ ಜೊತೆ ಮತ್ತೊಬ್ಬ ದೊಡ್ಡವರ ಹೆಸರು!
ಶಾಸಕ ಸ್ಥಾನದಿಂದ ಅನರ್ಹಗೊಂಡು ಉಪಚುನಾವಣೆಯಲ್ಲಿ ಮರು ಆಯ್ಕೆಯಾಗದ ಕಾರಣ ಸಚಿವ ಸ್ಥಾನ ಪಡೆಯಲು ವಿಶ್ವನಾಥ್ ಅನರ್ಹರಾಗಿದ್ದಾರೆ. ಯಾವುದೇ ಪಕ್ಷಕ್ಕೆ ಸೇರಿದ ವಿಧಾನಸಭೆ / ವಿಧಾನ ಪರಿಷತ್ ಸದಸ್ಯ ಶಾಸಕ ಸ್ಥಾನದಿಂದ ಅನರ್ಹಗೊಂಡರೆ ಮರು ಆಯ್ಕೆಯಾಗುವವರೆಗೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬಾರದು ಎಂದು ಸಂವಿಧಾನದ ಪರಿಚ್ಛೇಧ 164 (1 ಬಿ) ಹಾಗೂ 361 (ಬಿ) ಹೇಳುತ್ತದೆ.