'ನಾನು ಕೊಚ್ಚೆಗುಂಡಿ ಆದ್ರೆ ವಿಶ್ವನಾಥ್‌ ಭಿಕ್ಷುಕ; ಕಡೆಗೆ ಭಿಕ್ಷುಕನನ್ನ ಎಲ್ಲಿಗೆ ಕಳಿಸ್ತಾರ್ರಿ'

Dec 2, 2020, 9:51 AM IST

ಬೆಂಗಳೂರು (ಡಿ. 02): ಚಾಮುಂಡಿ ಸನ್ನಿಧಿಯಲ್ಲಿ ಆಣೆ ಪ್ರಮಾಣ ಪ್ರಹಸನ ಮಾಡಿ, ಕಿತ್ತಾಡಿಕೊಂಡಿದ್ದ ಎಚ್. ವಿಶ್ವನಾಥ್ ಹಾಗೂ ಸಾ ರಾ ಮಹೇಶ್ ಇದೀಗ ಮತ್ತೆ ವಾಕ್ಸಮರ ಶುರು ಮಾಡಿದ್ದಾರೆ. 

ಎಚ್. ವಿಶ್ವನಾಥ್‌ ಸಚಿವ ಸ್ಥಾನಕ್ಕೆ ಅನರ್ಹ ಎಂದು ಹೈಕೋರ್ಟ್ ಆದೇಶದ ಬೆನ್ನಲ್ಲೇ ಸಾ. ರಾ ಮಹೇಶ್, ಇದು ದೇವರು ಕೊಟ್ಟ ಶಿಕ್ಷೆ ಎಂದು ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ, ಸಾರಾ ಮಹೇಶ್ ಕೊಚ್ಚೆ ಗುಂಡಿ ಇದ್ದಂಗೆ. ಅವರ ಬಗ್ಗೆ ನಾನು ಮಾತಾಡಲ್ರಿ...ಎಂದು ವಿಶ್ವನಾಥ್ ಹೇಳಿದ್ದರು. 

ಖಾರದ ಪುಡಿ ಎರಚಿ ಮಾಜಿ ಶಾಸಕರ ಕಿಡ್ನಾಪ್, ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ; News Hour ಸುದ್ದಿ!

ಇನ್ನು ಮುಂದುವರೆದು ಸಾರಾ ಮಹೇಶ್,  ವಿಶ್ವನಾಥ್‌ ಭಿಕ್ಷುಕ. ಮೂಲೆಯಲ್ಲಿ ಕೂತಿದ್ದ ಅವರಿಗೆ ಅಧಿಕಾರದ ಭಿಕ್ಷೆ ಕೊಟ್ಟಿದ್ದು ಜೆಡಿಎಸ್‌.ನಂತರ ಹಣ ಕೊಡುವವರ ಬಳಿ ಹೋಗಿ ಭಿಕ್ಷೆ ಪಡೆದಿದ್ದಾರೆ. ಕರೆಯೋ ಹಸು ಕೊಟ್ಟು ಒದೆಯೋ ಕೋಣ ತಗೊಂಡ ಪರಿಸ್ಥಿತಿ ವಿಶ್ವನಾಥ್‌ರದ್ದ ಎಂದು ಲೇವಡಿ ಮಾಡಿದ್ದಾರೆ.