Apr 9, 2023, 5:53 PM IST
ರಾಜ್ಯಸಭೆ ವಿರೋಧ ಪಕ್ಷದ ನಾಯಕನಾಗಿದ್ದ ನನಗೆ ಹಲವು ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ. ಖುದ್ದು ಮೋದಿ ಅಹ್ವಾನ ನೀಡಿದ್ದಾರೆ. ಚಹಾ ಕೂಟ, ರಾಯಭಾರಿಗಳ ಭೇಟಿ, ರಾಷ್ಟ್ರಪತಿಗಳ ಭೇಟಿ, ಸರ್ಕಾರಿ ನಿಯೋಜಿತ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಮೋದಿ ನನಗೆ ಆಹ್ವಾನ ನೀಡಿದ್ದಾರೆ. ಆದರೆ ನಾನು ಭಾಗಿಯಾಗಿಲ್ಲ. ಇನ್ನು ಸಂಸತ್ತಿನ ಒಳಗೆ ನಾನು ಮೋದಿ ನೀತಿಗಳ ವಿರುದ್ಧ ಮಾತನಾಡಿದ್ದೇನೆ. ಮೋದಿ ವಿರುದ್ಧ ಕ್ರೂರವಾಗಿ ಮಾತನಾಡಿದ್ದೇನೆ. ಇದಕ್ಕೆ ಕ್ಷಮೆ ಇರಲಿ ಎಂದು ಕಾಂಗ್ರೆಸ್ ಮಾಜಿ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. ಏಷ್ಯಾನೆಟ್ ನ್ಯೂಸ್ ಜೊತೆಗಿನ ಸಂವಾದದಲ್ಲಿ ಆಜಾದ್ ಪ್ರಸಕ್ತ ರಾಜಕೀಯ ಹಾಗೂ ಕಾಂಗ್ರೆಸ್ ಅಧಪತನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅಜಾದ್ ಜೊತೆಗಿನ ಸಂದರ್ಶನದ ಸಂಪೂರ್ಣ ವಿಡಿಯೋ ಇಲ್ಲಿದೆ