Jun 22, 2023, 8:34 PM IST
ಚಾಮರಾಜನಗರ(ಜೂ.22): ಚಾಮರಾಜನಗರದಲ್ಲಿ ಸೋಮಣ್ಣ ಅವರ ಸೋಲಿಗೆ ನೀವೇ ಕಾರಣ ಅಂತ ಜಿಲ್ಲಾ ಬಿಜೆಪಿ ಮುಖಂಡರಿಗೆ ಕಾರ್ಯಕರ್ತನೋರ್ವ ಇದೀಗ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಸಚಿವ ಸದಾನಂದಗೌಡ ಅವರ ಎದುರೇ ಫುಲ್ ಕ್ಲಾಸ್ ತೆಗೆದಕೊಂಡಿದ್ದಾರೆ. ಸೋಮಣ್ಣ ಅವರ ಸೋಲಿಗೆ ಕಾಂಗ್ರೆಸ್ ಗ್ಯಾರಂಟಿ ಕಾರಣ ಅಲ್ಲ, ಜಿಲ್ಲಾ ಮುಖಂಡರಾದ ನೀವೇ ಇದಕ್ಕೆ ಕಾರಣ, ಸೋಲಿಸಿ ಮನೆಗೆ ಹೋಗ್ತೀರಿ ನಂತರ ಬಂದು ಹೇಳಿಕೆ ಕೊಡ್ತೀರಿ, ಮೊದಲು ಕಾರ್ಯಕರ್ತರಿಗೆ ಮಾತನಾಡಲು ಅವಕಾಶ ನೀಡಿ, ಚುನಾವಣೆಯಲ್ಲಿ ಯಾಕೆ ಹಿನ್ನಡೆ ಆಗಿದೆ ಅಂತ ನಾವು ಹೇಳ್ತೀವಿ ಅಂತ ಸೋಮಣ್ಣ ಅವರ ಬೆಂಬಲಿಗ ಕುಮಾರ್ ಅವರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ, ಕಾಂಗ್ರೆಸ್ ಪರ್ಸೆಂಟೇಜ್ ಸರ್ಕಾರ ಅದರಲ್ಲಿ ಅನುಮಾನ ಬೇಡ!