Jul 30, 2020, 7:18 PM IST
ಬೆಂಗಳೂರು(ಜು.30): ರಾಜ್ಯ ಸರ್ಕಾರಕ್ಕೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡು ಆಡಳಿತ ನೀಡಿ ಎಂದು ಸಲಹೆ ನೀಡಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ವೈಯುಕ್ತಿಕವಾಗಿ ಲಾಭ ಪಡೆದುಕೊಂಡಿದ್ದೇನೆ ಎಂದರ್ಥವಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಅಭಿವೃದ್ದಿಗೆ ಪೂರಕವಾದ ವಿಚಾರಗಳನ್ನು ಸರ್ಕಾರದ ಗಮನ ಸೆಳೆದಿದ್ದೇನೆ. ಅಭಿವೃದ್ದಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಸಮ್ಮನಿದ್ದೇನೆ. ನಮ್ಮ ಭವಿಷ್ಯವನ್ನು ಹೇಳುತ್ತಿರುವ ಯೋಗೀಶ್ವರ್ ಯಾವಾಗ ಭವಿಷ್ಯ ಹೇಳುವುದನ್ನು ಆರಂಭಿಸಿದರು ಎಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಯೋಗೇಶ್ವರ್ ಮಾತು ಭೂತದ ಬಾಯಲ್ಲಿ ಭಗವದ್ಗೀತೆಯಂತೆ: ಶರವಣ
ರಾಜ್ಯ ಕೋವಿಡ್ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಪ್ರಚಾರಕ್ಕಾಗಿ ರಾಜಕೀಯ ಮಾಡಬಾರದು. ಹೀಗೆ ಮಾಡಿದರೆ ಅದು ಜನರಿಗೆ ಪೆಟ್ಟು ಬೀಳುತ್ತದೆ, ಹೀಗಾಗಿ ಸರ್ಕಾರಕ್ಕೆ ಕೆಲವೊಂದು ಉಪಯುಕ್ತ ಸಲಹೆ ನೀಡಿದ್ದೇನೆ. ಹೀಗೆ ಅಂದ ಮಾತ್ರಕ್ಕೆ ಬೆಂಬಲ ಕೊಟ್ಟಿದ್ದೇನೆ ಎಂದರ್ಥವಲ್ಲ ಎಂದು ಮಾಜಿ ಸಿಎಂ ಹೇಳಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಮತ್ತೇನಂದ್ರು ನೀವೇ ನೋಡಿ