Oct 17, 2021, 5:09 PM IST
ಬೆಂಗಳೂರು (ಅ. 17): ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿ ಶನಿವಾರ ಹಮ್ಮಿಕೊಂಡಿದ್ದ ‘ಹಲೋ ಮಿನಿಸ್ಟರ್’ (Hello Minister) ಕಾರ್ಯಕ್ರಮಕ್ಕೆ ತೋಟಗಾರಿಕೆ ಸಚಿವ ಮುನಿರತ್ನ (munirathna) ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ, ಶೀಘ್ರದಲ್ಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಅಡಕೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಸರ್ಕಾರದಿಂದ 10 ಕೋಟಿ ರು. ಅನುದಾನ ನೀಡಲಿದ್ದು, ಈಗಾಗಲೇ 2.75 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
'ಸಿದ್ದರಾಮಯ್ಯನಂತ 'ಮನೆಮುರುಕರು' ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಅಂದುಕೊಂಡಿದ್ದಾರೆ'
ಇನ್ನು ಮುನಿರತ್ನ ಬೆಳೆದು ಬಂದ ಹಾದಿಯನ್ನು ನೋಡುವುದಾದರೆ, ಬೆಂಗಳೂರು ಮೂಲದವರಾದ ಮುನಿರತ್ನ ಫುಟ್‌ಪಾತ್‌ನಲ್ಲಿ ಇಡ್ಲಿ ಮಾಡುತ್ತಿದ್ದರು. ಗೋಡೆಗೆ ಬಣ್ಣ ಬಳಿಯುತ್ತಿದ್ದರು. ಹಸುಗಳನ್ನು ಕಟ್ಟಿ ಹಾಲು ಮಾರುತ್ತಿದ್ದರಂತೆ. ಕಷ್ಟದಿಂದ ಬೆಳೆದು ಬಂದ ಮುನಿರತ್ನ ರಾಜಕೀಯ ಪ್ರವೇಶ ಮಾಡಿದ್ದು ರೋಚಕ ಕಥೆ ಇಲ್ಲಿದೆ ನೋಡಿ..!