Nov 30, 2023, 8:08 PM IST
ಬೆಂಗಳೂರು (ನ.30): ಕೊನೆಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಬಿಆರ್‌ಎಸ್ ಪ್ರಾಬಲ್ಯವನ್ನು ಭೇದಿಸಲು ಯಶಸ್ವಿಯಾಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ತೆಲಂಗಾಣದಲ್ಲಿ ಒಂದೋ ಕಾಂಗ್ರೆಸ್ ಪಕ್ಷದ ಗೆಲುವು ಎಂದಿದ್ದರೆ, ಇನ್ನೂ ಕೆಲವು ಕಾಂಗ್ರೆಸ್ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಲಿದೆ ಎಂದಿದೆ.
ಇದರೊಂದಿಗೆ ಹಾಲಿ ಆಡಳಿತಾರೂಢ ಬಿಆರ್‌ಎಸ್ ಪಕ್ಷದ ನಾಯಕ ಮುಖ್ಯಮಂತ್ರಿ ಚಂದ್ರಶೇಖರ್ ರಾವ್‌ಗೆ ದೊಡ್ಡ ಹಿನ್ನಡೆಯಾಗಿದೆ. ಇನ್ನು ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದ್ದರೆ, ತೆಲಂಗಾಣದಲ್ಲಿ ಪಕ್ಷ ಅಧಿಕಾರ ಪಡೆಯಲಿದೆ ಎಂದಿದೆ.
ಛತ್ತೀಸ್‌ಗಢ, ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಪರಾಕ್, ಮಿಜೋರಾಂ ಅತಂತ್ರ!
ಸಿಪ್ಯಾಕ್ ಪ್ರಕಾರ, ಬಿಆರ್‌ಎಸ್ 41 ಕ್ಷೇತ್ರಗಳಲ್ಲಿ ಗೆಲುವು ಕಾಣಲಿದ್ದರೆ, ಕಾಂಗ್ರೆಸ್ 65 ಹಾಗೂ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ ಎಂದಿದೆ. ಎಐಎಂಐಎಂ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸೋದಿಲ್ಲ ಎಂದು ಹೇಳಿದೆ.