Dec 2, 2023, 11:25 PM IST
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3 ರಂದು ಹೊರಬೀಳಲಿದೆ. ಈಗಾಲೇ ಭಾರಿ ಲೆಕ್ಕಾಚಾರಗಳು ನಡೆಯುತ್ತಿದೆ. ಮತಗಟ್ಟೆ ಸಮೀಕ್ಷೆಗಳು ವರದಿ ನೀಡಿದ್ದು, ಕುತೂಹಲ ಮತ್ತಷ್ಟು ಕೆರಳಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಈ ಬಾರಿ ಅಭೂತಪೂರ್ವ ಗೆಲುವು ದಾಖಲಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿದೆ. ಇತ್ತ ಬಿಆರ್‌ಎಸ್ ಹೆಚ್ಚಿನ ಸ್ಥಾನ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.ಕಳೆದ 20 ವರ್ಷದಿಂದ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಇದೀಗ ಇತಿಹಾಸ ರಚಿಸುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ. ಸಮೀಕ್ಷೆಗಳು ಬಿಜೆಪಿ ಪರ ಒಲವು ವ್ಯಕ್ತವಾಗಿದೆ. 1993ರ ಬಳಿಕ ರಾಜಸ್ಥಾನದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾಗಿದೆ.ಇದೇ ಸಂಪ್ರದಾಯ ಮುಂದುವರಿಯುತ್ತಾ ಅನ್ನೋ ಕೂತೂಹಲ ಗರಿಗೆದರಿದೆ. ಚುನಾವಣಾ ಫಲಿತಾಂಶ ಕುತೂಹಲ, ರಾಜ್ಯ ರಾಜಕಾರಣ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.