ಈಶ್ವರಪ್ಪ ಪುತ್ರನ ಹಾವೇರಿ ಕನಸಿಗೆ ಆರಂಭದಲ್ಲೇ ವಿಘ್ನ: ಲಿಂಗಾಯತ ಪ್ರಾಬಲ್ಯ ಕ್ಷೇತ್ರದಲ್ಲಿ ಕುರುಬರಿಗೇಕೆ ಟಿಕೆಟ್..?

Aug 28, 2023, 12:12 PM IST

ಹಾವೇರಿ: ಕೆ.ಎಸ್‌. ಈಶ್ವರಪ್ಪ ಪುತ್ರನ ಹಾವೇರಿ ಕನಸಿಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ಲಿಂಗಾಯತ(Lingayat) ಪ್ರಾಬಲ್ಯ ಕ್ಷೇತ್ರದಲ್ಲಿ ಕುರುಬರಿಗೇಕೆ ಟಿಕೆಟ್..? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಲಿಂಗಾಯತರಿಗೇ ಟಿಕೆಟ್(Ticket) ನೀಡುವಂತೆ ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ. ಕೆ.ಇ. ಕಾಂತೇಶ್ ಲೋಕಸಭಾ ಸ್ಪರ್ಧೆಗೆ ಲಿಂಗಾಯತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಶ್ವರಪ್ಪ ಹಾಗೂ ಪುತ್ರನ ವಿರುದ್ಧ ಬಿ.ಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದಿಂದ ಒಪ್ಪಿಗೆ ಪಡೆಯದೇ ಕ್ಷೇತ್ರದಲ್ಲಿ ಕಾಂತೇಶ್ ಓಡಾಡ್ತಿದ್ದಾರೆ. ಹೀಗಾಗಿ ಬಿ.ಸಿ. ಪಾಟೀಲ್ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಬಿ.ಸಿ ಪಾಟೀಲ್(BC Patil)  ಮಾತಿಗೆ ಸ್ಥಳೀಯ ಬಿಜೆಪಿ ಮುಖಂಡರೂ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾವೇರಿ(Haveri) ಕ್ಷೇತ್ರದ ಪರಾಜಿತ ಅಭ್ಯರ್ಥಿ ಗವಿಸಿದ್ದಪ್ಪರಿಂದ ಬೆಂಬಲ ಸೂಚಿಸಿದ್ದು, ಹಾವೇರಿ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ನಿರ್ಣಯಕವಾಗಿದ್ದಾರೆ. ಹಾಗಾಗಿ ಲಿಂಗಾಯತ ಪ್ರಾಬಲ್ಯ ಕ್ಷೇತ್ರದಲ್ಲಿ ಲಿಂಗಾಯತರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯ ಕೇಳಿಬಂದಿದೆ.

ಇದನ್ನೂ ವೀಕ್ಷಿಸಿ:  'ಲೋಕ' ಸಮರಕ್ಕೆ ಸೋತವರ ಸರ್ಕಸ್: ಟಿಕೆಟ್‌ ಗಿಟ್ಟಿಸಲು ಬಿಎಸ್‌ವೈ ಮೊರೆ