ಸಿಎಂ ಬೊಮ್ಮಾಯಿ ಅವರ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಇಂದು ಮಧ್ಯಾಹ್ನ 2.15 ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲ ಹಂತದಲ್ಲಿ 20 ರಿಂದ 24 ಮಂದಿ ಸಂಪುಟ ಸೇರ್ಪಡೆಯಾಗುವ ಸಂಭವವಿದೆ.
ಬೆಂಗಳೂರು (ಆ. 04): ಸಿಎಂ ಬೊಮ್ಮಾಯಿ ಅವರ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಇಂದು ಮಧ್ಯಾಹ್ನ 2.15 ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲ ಹಂತದಲ್ಲಿ 20 ರಿಂದ 24 ಮಂದಿ ಸಂಪುಟ ಸೇರ್ಪಡೆಯಾಗುವ ಸಂಭವವಿದೆ.
ಈ ಬಾರಿಯ ವಿಶೇಷವೆಂದರೆ ಡಿಸಿಎಂ ಹುದ್ದೆಗೆ ವರಿಷ್ಠರು ಒಲವು ತೋರಿಲ್ಲ. ಇನ್ನು ಅರವಿಂದ್ ಬೆಲ್ಲದ್, ಶಶಿಕಲಾ ಜೊಲ್ಲೆ ಹಾಗೂ ಪೂರ್ಣಿಮಾ ಶ್ರೀನಿವಾಸ್ ಹೆಸರು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇನ್ನು ಈಶ್ವರಪ್ಪಗ ಮಂತ್ರಿಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದೆ. ವಿಜಯೇಂದ್ರ ಸಂಪುಟ ಸೇರ್ಪಡೆ ವಿಚಾರ ಮೋದಿ ಅಂಗಳದಲ್ಲಿದೆ. ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸುನೀಲ್ ಕುಮಾರ್ ನಡುವೆ ಪೈಪೋಟಿ ಶುರುವಾಗಿದೆ.