ದೀಪಾವಳಿ ಬಳಿಕ ಚನ್ನಪಟ್ಟಣ ಕುರುಕ್ಷೇತ್ರಕ್ಕೆ ಜೆಡಿಎಸ್ ಭೀಷ್ಮ ದೇವೇಗೌಡರ ಎಂಟ್ರಿ!

ದೀಪಾವಳಿ ಬಳಿಕ ಚನ್ನಪಟ್ಟಣ ಕುರುಕ್ಷೇತ್ರಕ್ಕೆ ಜೆಡಿಎಸ್ ಭೀಷ್ಮ ದೇವೇಗೌಡರ ಎಂಟ್ರಿ!

Published : Oct 30, 2024, 07:06 PM IST

ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಡಿಕೆ ಸುರೇಶ್ ಮಾತುಗಳು ದಳಪತಿಗಳಿಗೆ ಬ್ರಹ್ಮಾಸ್ತ್ರವಾಗಿ ಬಳಕೆಯಾಗುತ್ತಿದೆ. ಕಾಂಗ್ರೆಸ್ ಪಾಳೆಯದಿಂದ ಎರಡು ಪ್ರತ್ಯಸ್ತ್ರಗಳು ಚುನಾವಣಾ ಅಖಾಡಕ್ಕೆ ತಿರುವು ನೀಡುವ ಸಾಧ್ಯತೆ ಇದೆ. ದೀಪಾವಳಿ ನಂತರ ದೇವೇಗೌಡರ ರಂಗಪ್ರವೇಶದಿಂದ ಚುನಾವಣಾ ರಂಗ ಹೇಗೆ ಬದಲಾಗುತ್ತದೆ ಎಂದು ಕಾದು ನೋಡಬೇಕಿದೆ.

ಚನ್ನಪಟ್ಟಣ ಕುರುಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿತು ಗೌಡಾಗ್ನಿ ಕಿಚ್ಚು..! ಡಿಕೆ ಸಹೋದರದ ಅದೊಂದು ಮಾತು.. ಅಖಾಡದಲ್ಲಿ ಯಾರಿಗೆ ಮುತ್ತು, ಯಾರಿಗೆ ಕುತ್ತು..? 

ಮೊಮ್ಮಗನನ್ನು ಗೆಲ್ಲಿಸೋದಕ್ಕೆ ಚನ್ನಪಟ್ಟಣಕ್ಕೆ ಆ್ಯಂಬುಲೆನ್ಸ್'ನಲ್ಲಿ ಬರ್ತಾರಾ ಜೆಡಿಎಸ್ ಭೀಷ್ಮಾಚಾರ್ಯ..? ದೇವೇಗೌಡರ ರಂಗಪ್ರವೇಶ ಬೊಂಬೆನಾಡಿನ ಸಮರಾಂಗಣದ ಚಿತ್ರಣವನ್ನೇ ಬದಲಿಸಿ ಬಿಡುತ್ತಾ..? ಎಲ್ಲವನ್ನೂ "ಬರೆದಿಟ್ಟಿದ್ದೇನೆ, ಬಡ್ಡಿ ಸಮೇತ ವಾಪಸ್ ಕೊಡ್ತೇನೆ.." ಏನಿದು ದಳಪತಿ ಮಾಡಿ ಶಪಥ..! ಗೌಡರ ಗತ್ತು.. ಡಿಕೆ ಬ್ರದರು ಮಾತು... ಕೈಗೆ ಎದುರಾಯ್ತಾ ಆಪತ್ತು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಗೌಡಾಗ್ನಿ ಜ್ವಾಲೆ..!

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಆಡಿರೋ ಮಾತೇ ಚನ್ನಪಟ್ಟಣ ರಣರಂಗದಲ್ಲಿ ದಳಪತಿಗಳ ಪಾಲಿಗೆ ಬ್ರಹ್ಮಾಸ್ತ್ರ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಾಳೆಯದಿಂದ್ಲೂ ನುಗ್ಗಿ ಬಂದಿರೋ ಆ ಎರಡು ಅಸ್ತ್ರಗಳು ಬೊಂಬೆನಾಡಿನ ಅಖಾಡಕ್ಕೆ ತಿರುವು ಕೊಡಲಿವೆಯಾ..? ಅಷ್ಟಕ್ಕೂ ಯಾವುದು ಆ ಅಸ್ತ್ರ..?  ಚನ್ನಪಟ್ಟಣ ಉಪಯುದ್ಧದಲ್ಲಿ ಅಸಲಿ ಆಟ ಈಗ ಶುರುವಾಗಿದೆ.. ಮಾತಿನ ಮಲ್ಲಯುದ್ಧದ ಟ್ರೇಲರ್ ಭಾರೀ ಸದ್ದು ಮಾಡ್ತಾಇದೆ.. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಆಡಿರೋ ಮಾತೇ ದಳಪತಿಗಳ ಪಾಲಿಗೆ ಬ್ರಹ್ಮಾಸ್ತ್ರ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಾಳೆಯದಿಂದ್ಲೂ ನುಗ್ಗಿ ಬಂದಿವೆ ಆ ಎರಡು ಅಸ್ತ್ರಗಳು. 

ದೀಪಾವಳಿಯ ನಂತರ ಚನ್ನಪಟ್ಟಣ ಅಖಾಡಕ್ಕೆ ದೇವೇಗೌಡ್ರು ಎಂಟ್ರಿ ಕೊಡ್ತಾರೆ ಅಂತ ಹೇಳಲಾಗ್ತಿದೆ. ದೇವೇಗೌಡ್ರ ರಂಗಪ್ರವೇಶ ಚನ್ನಪಟ್ಟಣ ರಣರಂಗಕ್ಕೆ ತಿರುವು ಕೊಡುತ್ತಾ..? ಕಾಂಗ್ರೆಸ್ ನಾಯಕರಿಗೆ ಗೌಡರ ಭಯ ಶುರುವಾಗಿದೆ ಅನ್ನೋ ಬಿಜೆಪಿ ನಾಯಕರ ಮಾತೇ ನಿಜವಾಗುತ್ತಾ..? ಅಷ್ಟಕ್ಕೂ ಗೌಡರ ಎಂಟ್ರಿಯಿಂದ ಆಗಲಿರೋ ಪರಿಣಾಮ ಎಂಥದ್ದು..? ಕಾದುನೋಡಬೇಕಿದೆ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more