Aug 24, 2020, 2:35 PM IST
ನವದೆಹಲಿ, (ಆ.24): ಪಕ್ಷದ ನಾಯಕತ್ವ ವಿಚಾರವಾಗಿ ಭಿನ್ನಮತ, ವಾದ-ವಿವಾದ, ಅಪಸ್ವರಗಳು ಭುಗಿಲೆದ್ದಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೋಮವಾರ ನಡೆದಿದೆ.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಮುಂದಿನ ದಿನಗಳಲ್ಲಿ ಮುನ್ನಡೆಸುವವರು ಯಾರು ಎಂಬ ಬಗ್ಗೆ ರರ್ಚೆಗಳು ನಡೆದಿದ್ದು, ಸೋನಿಯಾ ಗಾಂಧಿಯವರು ತಾವು ಮಧ್ಯಂತರ ಅಧ್ಯಕ್ಷೆ ಹುದ್ದೆ ತೊರೆಯಲಿದ್ದು ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಕೇಳಿಕೊಂಡರು.
ಗಾಂಧಿಯೇತರರಿಗೆ 'ಕೈ' ಪಟ್ಟ: ಅಧ್ಯಕ್ಷ ರೇಸ್‌ನಲ್ಲಿ ಖರ್ಗೆ ಹೆಸರು ಮುಂಚೂಣಿಯಲ್ಲಿ
ಇದರೊಂದಿಗೆ ಸೋನಿಯಾ ರಾಜೀನಾಮೆ ನೀಡುವುದು ಪಕ್ಕ ಆದಂತಾಗಿದ್ದು, ಎಐಸಿಸಿಗೆ ಹೊಸ ಅಧ್ಯಕ್ಷರಾಗುವುದು ಫಿಕ್ಸ್. ಹಾಗಾದ್ರೆ, ಹೊಸ ಅಧ್ಯಕ್ಷರ ನೇಮಕವಾಗಲು ಏನೇನು ಮಾಡ್ಬೇಕು..? ಕಾಂಗ್ರೆಸ್ ರೂಲ್ ಬುಕ್‌ನಲ್ಲಿವೆ ಹತ್ತಾರು ನಿಯಮಗಳು.