ಗೋವಾ, ಉತ್ತಾರಾಖಂಡದಲ್ಲಿ ಕಾಂಗ್ರೆಸ್-ಬಿಜೆಪಿ ಫೈಟ್

Mar 9, 2022, 10:13 PM IST

ನವದೆಹಲಿ (ಮಾ. 9): ಗೋವಾ (Goa) ಹಾಗೂ ಉತ್ತಾರಾಖಂಡ (Uttarakhand) ವಿಧಾನಸಭಾ ಚುನಾವಣೆ ಫಲಿತಾಂಶ ಏನಾಗಲಿದೆ? ಎಂಬುವುದಕ್ಕೂ ಲೋಕನೀತಿ- ಸಿಎಸ್‌ಡಿಎಸ್ (lokniti-csds) ಸಮೀಕ್ಷೆ  ಉತ್ತರ ಕೊಟ್ಟಿದೆ. ಪುಟ್ಟ ರಾಜ್ಯಗಳಾದರೂ ರಾಷ್ಟ್ರ ರಾಜಕಾರಣದ ಮೇಲೆ ಅದರದ್ದೇ ಆದ ಛಾಪು ಪೂಡಿಸಲಿವೆ ಇಲ್ಲಿನ ಚುನಾವಣಾ ಫಲಿತಾಂಶ (Election Results). ಎರಡೂ ಕಡೆ ಬಿಜೆಪಿ (BJP) ಅಧಿಕಾರದಲ್ಲಿದ್ದೂ, ಅದನ್ನು ಉಳಿಸುವ ಸವಾಲು ಬಿಜೆಪಿ ಮುಂದಿದೆ. 

ಗೋವಾದಲ್ಲಿ ಕಾಂಗ್ರೆಸ್‌ - ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ.  ಲೋಕನೀತಿ- ಸಿಎಸ್‌ಡಿಎಸ್ ಎಕ್ಸಿಟ್‌ ಪೋಲ್‌ ಪ್ರಕಾರ ಗೋವಾದಲ್ಲಿ ಬಿಜೆಪಿ 32 ಶೇಕಡಾ ಮತಗಳನ್ನು ಪಡೆದರೆ,  ಕಾಂಗ್ರೆಸ್ 29 ಶೇಕಡಾ ಮತ ಗಳಿಸಲಿದೆ .  ತೃಣಮೂಲ ಕಾಂಗ್ರೆಸ್‌ 14 ಶೇಕಡಾ ಹಾಗೂ ಆಮ್ ಆದ್ಮಿ ಪಾರ್ಟಿ 7 ಶೇಕಡಾ ವೊಟ್‌ ಶೇರ್ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

5 States Election: ಉ.ಪ್ರ.ಕ್ಕೆ ಮತ್ತೆ ಯೋಗಿ ರಾಜ್ಯಭಾರ, ಪಂಜಾಬ್‌ಗೆ ಆಪ್‌..?
ಇನ್ನು ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಂಡಿತಾ ಎಂದು ಸಮೀಕ್ಷೆ ಹೇಳಿದೆ.  43 ಶೇ ಮತ ಗಳಿಸಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್‌ 38 ಶೇಕಡಾ ಮತ ಪಡೆಯಲಿದೆ.