Oct 12, 2020, 1:19 PM IST
ಬೆಂಗಳೂರು (ಅ. 12): ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಖಾತೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ಸುಧಾಕರ್‌ಗೆ ವಹಿಸಲಾಗಿದೆ. ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ.
ಒಂದು ಖಾತೆ ಬಿಟ್ಟು 2 ಖಾತೆ ಪಡೆದ ಕಾರಜೋಳ; ಮುಂದುವರೆದ ಶ್ರೀರಾಮುಲು ಅಸಮಾಧಾನ
ತಮಗೆ ಆರೋಗ್ಯ ಖಾತೆ ನೀಡುವ ಬಗ್ಗೆ ಡಾ. ಸುಧಾಕರ್ ಪ್ರತಿಕ್ರಿಯಿಸಿ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಹೊಂದಿಕೊಂಡಿದ್ದವು. 2013 ರಲ್ಲಿ ಕಾರಣಾಂತರಗಳಿಂದ ಬೇರ್ಪಟ್ಟವು. ಈಗ ಸಮನ್ವಯದ ಕೊರತೆಯಿಂದ ಎರಡೂ ಖಾತೆಯನ್ನು ಮತ್ತೆ ಸಿಎಂ ಒಂದು ಮಾಡಿದ್ದಾರೆ. ನನಗೆ ವಹಿಸಿರುವ ಆರೋಗ್ಯ ಖಾತೆಯನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ' ಎಂದು ಹೇಳಿದ್ದಾರೆ.